ADVERTISEMENT

ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಬಿಡುಗಡೆ ಮತ್ತೆ ಮುಂದೂಡಿಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 5:47 IST
Last Updated 22 ಆಗಸ್ಟ್ 2021, 5:47 IST
ಆರ್‌ಆರ್‌ಆರ್‌ ಚಿತ್ರದ ಪೋಸ್ಟರ್‌
ಆರ್‌ಆರ್‌ಆರ್‌ ಚಿತ್ರದ ಪೋಸ್ಟರ್‌   

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(ರೌದ್ರಂ ರಣಂ ರುಧಿರಂ) ಚಿತ್ರದ ದಿನಾಂಕವನ್ನು ಮತ್ತೆ ಮುಂದೂಡುವ ಸಾಧ್ಯತೆಗಳು ಹೆಚ್ಚಿವೆ.

ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ನಟಿಸಿರುವ ಆರ್‌ಆರ್‌ಆರ್‌ ಚಿತ್ರವು 2022 ಈದ್‌ ಸಂದರ್ಭದಲ್ಲಿ ಬಿಡುಗಡೆಯಾಗಬಹುದು ಎಂದು 'ಬಾಲಿವುಡ್‌ ಹಂಗಾಮಾ' ವರದಿ ಮಾಡಿದೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರವನ್ನು ಅಕ್ಟೋಬರ್ 13 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ನಿರ್ಮಾಪಕರು ಇದ್ದಾರೆ. ಆದರೆ, ಕೋವಿಡ್ 3ನೇ ಅಲೆಯ ಆತಂಕದಲ್ಲಿರುವ ಚಿತ್ರ ವಿತರಕರು ಆರ್‌ಆರ್‌ಆರ್‌ ಬಿಡುಗಡೆಯನ್ನು ವಿಳಂಬ ಮಾಡುವಂತೆ ರಾಜಮೌಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಒಂದು ವೇಳೆ ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದು ವಿತರಕರ ವಾದವಾಗಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ.

ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.