ADVERTISEMENT

ಮೂರು ದಶಕಗಳ ಬಳಿಕ ರಾಮಾಯಣದ ಆನಿಮೇಟೆಡ್‌ ಸಿನಿಮಾ ಅ.18ಕ್ಕೆ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2024, 6:17 IST
Last Updated 19 ಸೆಪ್ಟೆಂಬರ್ 2024, 6:17 IST
   

ನವದೆಹಲಿ: ರಾಮಾಯಣದ ಕಥೆಗಳ ಧಾರಾವಾಹಿ, ಸಿನಿಮಾಗಳನ್ನು ಎಂದಿಗೂ ಪ್ರೇಕ್ಷಕರು ಇಷ್ಟಪಡುತ್ತಾರೆ. ರಾಮಾಯಣದ ಆನಿಮೇಟೆಡ್‌ ಸಿನಿಮಾ ‘ರಾಮಾಯಣ; ದಿ ಲೆಜೆಂಡ್‌ ಆಫ್‌ ಪ್ರಿನ್ಸ್‌ ರಾಮ’ ಅ.18ಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ.

ಹಿಂದಿ, ಇಂಗ್ಲೀಷ್‌. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಈ ಕುರಿತು ಗ್ರೀಕ್‌ ಪಿಕ್ಚರ್ಸ್‌ ಇಂಡಿಯಾ ಪೋಸ್ಟರ್‌ ಮತ್ತು ಟೀಸರ್‌ ಅನ್ನು ಬಿಡುಗಡೆ ಮಾಡಿದೆ. 

ಇದೊಂದು ಜಪಾನೀಸ್‌–ಇಂಡಿಯನ್‌ ಆನಿಮೇಟೆಡ್‌ ಸಿನಿಮಾವಾಗಿದೆ. 1992ರಲ್ಲಿ ಮೊದಲ ಬಾರಿಗೆ ಸಿನಿಮಾ ಬಿಡುಗಡೆಯಾಗಿತ್ತು. ಮೂರು ದಶಕಗಳ ಬಳಿಕ ಅ.18ರಂದು ಮತ್ತೆ ಬಿಡುಗಡೆಯಾಗುತ್ತಿದೆ.

ADVERTISEMENT

ಈ ಚಲನಚಿತ್ರವನ್ನು ಜಪಾನ್‌ನ ಯುಗೋ ಸಾಕೋ ಮತ್ತು ಭಾರತದ ರಾಮ್ ಮೋಹನ್ ಅವರು ಜಂಟಿಯಾಗಿ ಸಹ-ನಿರ್ಮಾಣ ಮಾಡಿದ್ದರು. ಎರಡೂ ದೇಶಗಳ ಅನಿಮೇಷನ್ ಶೈಲಿಗಳನ್ನು ಮಿಶ್ರಣ ಮಾಡಲಾಗಿದೆ. ಚಿತ್ರವು, ರಾಕ್ಷಸ ರಾಜ ರಾವಣನಿಂದ ಅಪಹರಿಸಲ್ಪಟ್ಟ ತನ್ನ ಹೆಂಡತಿ ಸೀತೆಯನ್ನು ರಕ್ಷಿಸಲು ವಿಷ್ಣುವಿನ ಅವತಾರವಾದ ರಾಮನ ಪ್ರಯಾಣದ ಕಥಾಹಂದರವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.