ADVERTISEMENT

ನಟ ರಾಣಾ ದಗ್ಗುಬಾಟಿ ನಿರ್ಮಾಣದ ‘35’ ಚಿತ್ರ ಇದೇ ಆಗಸ್ಟ್‌ 15ಕ್ಕೆ ತೆರೆಗೆ

ಪಿಟಿಐ
Published 25 ಜೂನ್ 2024, 10:31 IST
Last Updated 25 ಜೂನ್ 2024, 10:31 IST
ರಾಣಾ ದಗ್ಗುಬಾಟಿ
ರಾಣಾ ದಗ್ಗುಬಾಟಿ    

ಹೈದರಾಬಾದ್‌: ಬಾಹುಬಲಿ ಖ್ಯಾತಿಯ ತೆಲುಗು ನಟ ರಾಣಾ ದಗ್ಗುಬಾಟಿ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರ ‘35’ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರಕ್ಕೆ ನಂದ ಕಿಶೋರ್ ಎಮಾನಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

11 ವರ್ಷದ ಮಗು ಕಲಿಕೆಯಲ್ಲಿ ಎದುರಿಸುವ ಸವಾಲು, ತಾಯಿ ಹೇಳಿಕೊಡುವ ಜೀವನದ ಪಾಠ ಸೇರಿದಂತೆ ತಾಯಿ– ಮಕ್ಕಳ ಬಾಂಧವ್ಯವನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ.

ADVERTISEMENT

‘ಈ ಕಥೆಯು ನನ್ನನ್ನು ಹೆಚ್ಚು ಪ್ರಭಾವಿತನನ್ನಾಗಿ ಮಾಡಿತು. ಕುಟುಂಬದಲ್ಲಿ ಎದುರಾಗುವ ಸವಾಲು, ಎರಡು ಮಕ್ಕಳ ನಡುವಿನ ವ್ಯತ್ಯಾಸ, ವಿಭಿನ್ನ ಮನಸ್ಥಿತಿ ಇವೆಲ್ಲವೂ ವಿಶಿಷ್ಟವಾಗಿ ತೆರೆ ಮೇಲೆ ಮೂಡಿಬರಲಿದೆ ಎಂದು ದಗ್ಗುಬಾಟಿ ತಿಳಿಸಿದ್ದಾರೆ.

ನಿವೇತಾ ಥಾಮಸ್, ಗೌತಮಿ, ಪ್ರಿಯದರ್ಶಿ, ವಿಶ್ವದೇವ್ ಮತ್ತು ಅರುಣ್ ದೇವ್ ಸೇರಿದಂತೆ ತಾರಾಗಣವಿದೆ. ಈ ಚಿತ್ರಕ್ಕೆ ವಿವೇಕ್ ಸಾಗರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘35‘ ಚಿತ್ರವನ್ನು ವಾಲ್ಟೇರ್ ಪ್ರೊಡಕ್ಷನ್ಸ್‌ನ ವಿಶ್ವದೇವ್ ರಾಚಕೊಂಡ, ಎಸ್. ಒರಿಜಿನಲ್‌ನ ಸೃಜನ್ ಯರಬೋಲು ಜತೆಗೆ ದಗ್ಗುಬಾಟಿ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.