ಮುಂಬೈ: ಪಾಕಿಸ್ತಾನದ ಸಿನಿಮಾಗಳಲ್ಲಿ ಅಭಿನಯಿಸಲು ಇಚ್ಚಿಸುತ್ತೇನೆ ಎಂಬ ತಮ್ಮ ಹೇಳಿಕೆ ವಿವಾದವಾದ ಬಗ್ಗೆ ಬಾಲಿವುಡ್ ನಟ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಶೀಘ್ರದಲ್ಲೇ ಬಿಡುಗಡೆಯಾಗಲಿರುವ 'ತೂ ಜೂಟಿ ಮೈ ಮಕ್ಕಾರ್' ಸಿನಿಮಾದ ಬಗೆಗಿನ ಸಂದರ್ಶನದಲ್ಲಿ ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಅವರು, ರಾಷ್ಟ್ರಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಹೇಳಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ರೆಡ್ ಸೀ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ್ದ ರಣಬೀರ್ ಕಪೂರ್ ಅವರು, ಪಾಕಿಸ್ತಾನದ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೇ ಅಭಿನಯಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದರು. ಈ ವೇಳೆ, ಕಲಾವಿದರಿಗೆ ಯಾವುದೇ ಗಡಿಗಳಿರಬಾರದು. ಅದರಲ್ಲೂ ಕಲೆಗಂತೂ ಇರಲೇಬಾರದು. ಅಂತದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದರು.
ರಣಬೀರ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಮಾತನಾಡಿರುವ ಅವರು, ಅಂದಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ಪಾಕಿಸ್ತಾನದಲ್ಲಿ ಸಾಕಷ್ಟು ನಟರು, ಗಾಯಕರು ಗೊತ್ತಿದ್ದಾರೆ. ಹಿಂದಿ ಚಿತ್ರದ ಗಾಯನಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಕಲೆ, ಕಲಾವಿದರಿಗೆ ಯಾವುದೇ ಬೌಂಡರಿಗಳು ಇರಬಾರದು ಎಂದು ನಾನು ಹೇಳಿದ್ದೇ ಹೊರತು ಪಾಕಿಸ್ತಾನದಲ್ಲಿ ಹೋಗಿ ಅಲ್ಲಿನ ಸಿನಿಮಾಗಳಲ್ಲಿ ನಟನೆ ಮಾಡುತ್ತೇನೆ ಎಂದಲ್ಲ. ರಾಷ್ಟ್ರಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದಿದ್ದಾರೆ.
ತೂ ಜೂಟಿ ಮೈ ಮಕ್ಕಾರ್ ಸಿನಿಮಾ ಮಾರ್ಚ್ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಮುಖ ಪಾತ್ರದಲ್ಲಿ ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಅನುಭವ್ ಸಿಂಗ್ ಬಸ್ಸಿ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.