ಬೆಂಗಳೂರು: ಪಾತ್ರ ಪೋಷಣೆಗಾಗಿ ಬಾಲಿವುಡ್ ನಟರು ವಿವಿಧ ಸಂದರ್ಭದಲ್ಲಿ ತಮ್ಮ ಮೈಯನ್ನು ಸಜ್ಜುಗೊಳಿಸುವುದರಲ್ಲಿ ನಿಸ್ಸೀಮರು. ಅದರಲ್ಲೂ, ಸಿಕ್ಸ್ ಪ್ಯಾಕ್ ಮೈಕಟ್ಟು ಪ್ರದರ್ಶಿಸುವುದು ಎಂದರೆ ಬಾಲಿವುಡ್ ನಟರ ಪಾಲಿಗೆ ಅದೊಂದು ವಿಶೇಷತೆಯೇ ಸರಿ.
ತಂದೆಯಾಗುತ್ತಿರುವ ಸಂಭ್ರಮದಲ್ಲಿರುವ ನಟ ರಣಬೀರ್ ಕಪೂರ್, ಶಂಶೇರಾ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮೈಕಟ್ಟು ಪ್ರದರ್ಶಿಸಿ ಸುದ್ದಿಯಾಗಿದ್ದಾರೆ.
ಸಾಹಸಮಯ ಕಥೆ ಹೊಂದಿರುವ ಚಿತ್ರ ಇದಾಗಿದ್ದು,ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.
ಆದಿತ್ಯ ಚೋಪ್ರಾ ನಿರ್ಮಾಣ ಮತ್ತು ಕರಣ್ ಮಲ್ಹೋತ್ರಾ ನಿರ್ದೇಶನದ ಚಿತ್ರ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಜುಲೈ 22ರಂದು ಬಿಡುಗಡೆಯಾಗುತ್ತಿದೆ.
ಶಂಶೇರಾ ಚಿತ್ರದಲ್ಲಿ ಸಂಜಯ್ ದತ್ ಮತ್ತು ವಾಣಿ ಕಪೂರ್ ಜತೆಗೆ ರಣಬೀರ್ ಕಪೂರ್ ನಟಿಸುತ್ತಿದ್ದು, ಅವರ ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.