ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ದೆಹಲಿಯ ಅತ್ಯಾಚಾರ ಪ್ರಕರಣದಲ್ಲಿ ಆ ಸಂತ್ರಸ್ತೆ ಒಂದು ವೇಳೆ ಬದುಕುಳಿದಿದ್ದರೆ ಸಮಾಜವನ್ನು ಹೇಗೆ ಎದುರಿಸುತ್ತಿದ್ದಳೆನ್ನುವ ಕಲ್ಪನೆಯ ಒಂದು ಎಳೆ ಇಟ್ಟುಕೊಂಡುದಯಾಳ್ ಪದ್ಮನಾಭನ್ ನಿರ್ದೇಶಿಸಿರುವ ‘ರಂಗನಾಯಕಿ’ ಚಿತ್ರ ಕನ್ನಡ ರಾಜ್ಯೋತ್ಸವದದಿನ ತೆರೆಕಾಣಲು ಸಜ್ಜಾಗಿದೆ.
ಈ ಚಿತ್ರ ಬಿಡುಗಡೆಗೂ ಮುನ್ನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ– 2019ರ ಇಂಡಿಯನ್ ಪನೋರಮ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ವರ್ಷ ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ್ ದಿ ಫೆಸ್ಟಿವಲ್ ಆಗಿದ್ದು, ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.
ಈ ಸಂತಸ ಹಂಚಿಕೊಳ್ಳಲು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದನಿರ್ದೇಶಕರು, ಕೇಕ್ ಕತ್ತರಿಸಿ, ಸಂಭ್ರಮಿಸಿದರು.
ಮೂವತ್ತೆಂಟು ವರ್ಷದ ಹಿಂದೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ರಂಗನಾಯಕಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ಶೀರ್ಷಿಕೆ ಮರುಬಳಕೆ ಮಾಡಿರುವ ‘ರಂಗನಾಯಕಿ –ವರ್ಜಿನಿಟಿ ವಾಲ್ಯೂಮ್ 1’ ಸಿನಿಮಾ ಈಗ ಹೊಸ ದಾಖಲೆ ಬರೆಯುತ್ತಿದೆ. ಅಂದಹಾಗೆ ತೆರೆಯಮೇಲೆ ಈ ಸಿನಿಮಾದ ಎರಡೇ ಭಾಗವನ್ನು ತರಲು ನಿರ್ಧರಿಸಿದ್ದಾರೆ ದಯಾಳ್.
ಗೋವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನವೆಂಬರ್ 24ರಂದು ಸಂಜೆ 5.30ಕ್ಕೆ ರಂಗನಾಯಕಿ ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ.ರೆಡ್ ಕಾರ್ಪೆಟ್ ಆತಿಥ್ಯದ ಆಹ್ವಾನ ನಿರ್ದೇಶಕರು, ನಿರ್ಮಾಪಕರು ಹಾಗೂ ಇನ್ನಿಬ್ಬರು ಕಲಾವಿದರಿಗೂ ಬಂದಿದೆ.ಚಿತ್ರ ತೆರೆ ಕಾಣುವ ‘ಮೊದಲೇ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಆಸ್ಕರ್ ಅವಾರ್ಡ್‌ಕನಸನ್ನೂ ನಾನು ಕೈಬಿಟ್ಟಿಲ್ಲ. ಆಸ್ಕರ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡು, ಮೂರ್ನಾಲ್ಕು ವರ್ಷಗಳಿಂದಚಿತ್ರಕಥೆ ಸಿದ್ಧಪಡಿಸುತ್ತಿದ್ದೇನೆ. ಚಿತ್ರಕಥೆ ಬಹುತೇಕ ಪೂರ್ಣವಾಗುವ ಹಂತಕ್ಕೆ ಬಂದಿದೆ’ ಎಂದು ದಯಾಳ್ ಖುಷಿಯಿಂದ ಹೇಳಿಕೊಂಡರು.
ನಾಯಕ ನಟರಾಗಿ ಅಭಿನಯಿಸಿರುವಎಂ.ಜಿ. ಶ್ರೀನಿವಾಸ್(ಶ್ರೀನಿ) ಮತ್ತುತ್ರಿವಿಕ್ರಮ್ ಪಾತ್ರಗಳಿಗೆ ನ್ಯಾಯ ಒದಗಿಸಿರುವ ಖುಷಿ ಇದೆ ಎಂದರು.ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ ಇದು. ಅದಿತಿ ಪ್ರಭುದೇವ ಇದರ ನಾಯಕಿ. ಅತ್ಯಾಚಾರಕ್ಕೆ ತುತ್ತಾದ ಯುವತಿಯೊಬ್ಬಳು ಸಮಾಜವನ್ನು ಹೇಗೆ ಎದುರಿಸಿ ನಿಲ್ಲುತ್ತಾಳೆ ಎಂಬುದೇ ಇದರ ಹೂರಣ.
ಎಸ್.ವಿ.ಎಂಟರ್‌ಟೈನ್‍ಮೆಂಟ್ ಲಾಂಛನದಡಿ ಎಸ್.ವಿ. ನಾರಾಯಣ್ ಇದಕ್ಕೆ ಬಂಡವಾಳ ಹೂಡಿದ್ದಾರೆ.ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಅವರ ಸಂಕಲನವಿದೆ. ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು. ಶೆಟ್ಟಿ ಇದರ ಕಾರ್ಯಕಾರಿ ನಿರ್ಮಾಪಕ.ಶಿವಾರಾಂ, ಸುಚೇಂದ್ರ ಪ್ರಸಾದ್, ಸುಂದರ್, ವೀಣಾ ಸುಂದರ್, ಶ್ರುತಿ ನಾಯಕ್ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ:ಗೋವಾ ಫಿಲ್ಮ್ಫೆಸ್ಟಿವಲ್ಗೆ ಹೊರಟ ‘ರಂಗನಾಯಕಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.