ADVERTISEMENT

ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!

ಉ.ಮ.ಮಹೇಶ್
Published 29 ಆಗಸ್ಟ್ 2019, 1:59 IST
Last Updated 29 ಆಗಸ್ಟ್ 2019, 1:59 IST
ರಾನು ಮೊಂಡಲ್‌
ರಾನು ಮೊಂಡಲ್‌   

ಸುಮಾರು 60 ದಾಟಿರುವ ಆ ಮಹಿಳೆ ದಿನಬೆಳಗಾಗುವುದರಲ್ಲಿ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿದ್ದಾರೆ. ಆಕೆ ದನಿಯಾದ ಚಿತ್ರಗೀತೆಯ ವಿಡಿಯೊ ಫೇಸ್‌ಬುಕ್‌, ಟ್ವಿಟರ್‌ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಸಂಖ್ಯ ಅಭಿಮಾನಿಗಳಿರುವ ಅವರೀಗ ಸಿಂಗಿಂಗ್‌ ಸ್ಟಾರ್‌!

ಪಶ್ಚಿಮಬಂಗಾಳದ ರಣಘಾಟ್‌ನ ಅವರು ರೈಲ್ವೆ ಫ್ಲಾಟ್‌ಫಾರಂನಲ್ಲಿ ಆತ್ಮಖುಷಿಗೆ ಹಾಡುತ್ತಿದ್ದುದು ಹೊಟ್ಟೆ ಹೊರೆಯಲು ನೆರವಾಗುತ್ತಿತ್ತು. ಆಕೆ ದನಿಯಲ್ಲಿ ಗಾಯಕಿ ಲತಾ ಮಂಗೇಷ್ಕರ್‌ ಛಾಯೆ ಗುರುತಿಸಿದ ಒಬ್ಬರು ವಿಡಿಯೊ ಮಾಡಿ ಜಾಲತಾಣಕ್ಕೆ ಹಾಕಿದರು. ಅದು ಅವರ ಅದೃಷ್ಟವನ್ನೇ ಬದಲಿಸಿತು. ಇವರು ರಾನು ಮಂಡಲ್‌.

ಇವರು ದನಿಯಾಗಿರುವ ಶೋರ್ ಚಿತ್ರದ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ.. ಮೌಜೋಂಕಿ ರವಾನಿ ಹೈ, ಜಿಂದಗೀ ಔರ್ ಕುಚ್‌ ಭೀ ನಹೀ.. ತೇರಿ, ಮೇರಿ ಕಹಾನಿ ಹೈ..’ ಗೀತೆ ಅವರನ್ನು ಈಗ ನೇರ ರೆಕಾರ್ಡಿಂಗ್‌ ರೂಂಗೆ ಕರೆತಂದಿದೆ.

ADVERTISEMENT

ಹಿನ್ನೆಲೆ ಗಾಯಕ ಹಿಮೇಶ್ ರೇಶಮಿಯಾ ಅವರೊಂದಿಗೆ ಚಿತ್ರವೊಂದಕ್ಕೆ ಹಿನ್ನೆಲೆ ಗಾಯಕಿಯೂ ಆಗಿದ್ದಾರೆ. ಆ ಚಿತ್ರದ ಹೆಸರು: ಹ್ಯಾಪಿ ಹಾರ್ಡಿ ಅಂಡ್ ಹೀರ್. ಗೀತೆ: ತೇರಿ ಮೇರಿ ಕಹಾನಿ.

ಫೇಸ್‌ಬುಕ್‌ನಲ್ಲಿ ಅಗಾಧ ಜನಪ್ರಿಯತೆಯನ್ನು ಪಡೆದಂತೆ ರಾನು ಮಂಡಲ್‌ ಹುಡುಕಾಟವೂ ಆರಂಭವಾಯಿತು. ಆವರು ಕೋಲ್ಕತ್ತದಲ್ಲಿ ಇದ್ದಾರೆ ಎಂಬುದು ತಿಳಿದಂತೆ ಆಕೆಯ ಪ್ರತಿಭೆಗೆ ವೇದಿಕೆಯನ್ನು ಒದಗಿಸಲು ಚಿತ್ರರಂಗದ ಕೆಲವರೂ ಮುಂದಾದರು. ಹಿಮೇಶ್‌ ರೇಶಮಿಯಾ ತಮ್ಮ ಮುಂದಿನ ಚಿತ್ರದಲ್ಲಿ ಹಾಡು ಹಾಡಿಸಲು ಮುಂದಾದರು. ಶೀಘ್ರದಲ್ಲಿಯೇ ಹಿಂದಿ ಕಿರುತೆರೆ ವಾಹಿನಿಯ ಸೂಪರ್‌ಸ್ಟಾರ್ ಸಿಂಗರ್‌ನಲ್ಲಿಯೂ ಕಾಣಿಸಿಕೊಳ್ಳಲಿರುವ ರಾನು ಅಲ್ಲಿನ ಸ್ಪರ್ಧಿಗಳು, ತೀರ್ಪುಗಾರರ ಜೊತೆಗೂ ಮಾತನಾಡಲಿದ್ದಾರೆ.

‘ಪ್ರತಿಭಾವಂತರು ಕಂಡರೆ ಹಾಗೆಯೇ ಬಿಡಬೇಡ. ಬೆಳೆಯಲು ನೆರವಾಗು’ ಎಂದು ಸಲ್ಮಾನ್‌ (ಖಾನ್‌) ಭಾಯ್‌ ತಂದೆ ಸಲೀಮ್‌ ಅಂಕಲ್‌ ಒಮ್ಮೆ ಹೇಳಿದ್ದರು. ನಾನು ಇಂದು ರಾನು ಅವರನ್ನು ಭೇಟಿ ಮಾಡಿದೆ. ಅವರಿಗೆ ಸುಶ್ರಾವ್ಯವಾದ ದನಿ ಇದೆ. ಅವರು ನನ್ನ ಮುಂದಿನ ಚಿತ್ರದಲ್ಲಿ ಹಾಡುತ್ತಿದ್ದಾರೆ. ಅವರ ದನಿ ಎಲ್ಲರಿಗೂ ತಲುಪಲಿದೆ’ ಎನ್ನುತ್ತಾರೆ ಹಿಮೇಶ್.

ಪಶ್ಚಿಮ ಬಂಗಾಳದ ಕೃಷ್ಣನಗರದ ನಿವಾಸಿಯಾದ ರಾನು ಮಂಡಲ್‌ ಅವರು ಯಾರು? ಹಿನ್ನೆಲೆ ಏನು? ಎಂಬುದು ಅಸ್ಪಷ್ಟ. ಸ್ಪಷ್ಟವಾದ ಸಂಗತಿ ಎಂದರೆ ಇದುವರೆಗೆ ಅವರಿಗಾಗಿ ಹಾಡಿ ಕೊಳ್ಳುತ್ತಿದ್ದರು.ಇನ್ನು ಕೇಳುಗರಿಗಾಗಿ ಹಾಡುತ್ತಾರೆ.

ಹಾಡು ಎಲ್ಲವನ್ನು ಮರೆಸುತ್ತದೆ. ಬಹುಶಃ ಮುಂದೆ ಅವರ ನೋವನ್ನೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.