ADVERTISEMENT

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ

ಸಿನಿಮಾವೊಂದಕ್ಕೆ ₹ 40 ಲಕ್ಷದಿಂದ ₹ 80 ಲಕ್ಷಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 8:32 IST
Last Updated 27 ಮೇ 2019, 8:32 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ‘ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ ಅವರು ತೆಲುಗಿಗೂ ಕಾಲಿಟ್ಟರು. ನಟ ವಿಜಯ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ತೆಲುಗಿನಲ್ಲಿ ಅವರಿಗೆ ಅವಕಾಶದ ಹೆಬ್ಬಾಗಿಲು ತೆರೆಯಿತು. ವಿಜಯ ದೇವರಕೊಂಡ ನಟಿಸುತ್ತಿರುವ ‘ಡಿಯರ್‌ ಕಾಮ್ರೇಡ್‌’ ಚಿತ್ರದಲ್ಲೂ ಅವರೇ ನಾಯಕಿ.

ಈಗ ತಮಿಳಿನಲ್ಲಿಯೂ ಅವರು ನಟಿಸಲು ಸಜ್ಜಾಗಿದ್ದಾರೆ. ಈ ನಡುವೆಯೇ ರಶ್ಮಿಕಾ ತಮ್ಮ ಸಂಭಾವನೆಯ ಗ್ರಾಫ್‌ ಕೂಡ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದು ಹೊಸ ಸುದ್ದಿ. ನಟರಾದ ಅಲ್ಲು ಅರ್ಜುನ್, ಮಹೇಶ್‌ ಬಾಬು, ಕಾರ್ತಿ, ನಿತಿನ್‌ ಜೊತೆಗೆ ರಶ್ಮಿಕಾ ನಟಿಸುವುದು ಖಾತ್ರಿಯಾಗಿದೆ. ಈ ನಟರು ನಟಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಸುತ್ತಿರುವುದು ಗುಟ್ಟೇನಲ್ಲ.

ADVERTISEMENT

ಒಂದು ಸಿನಿಮಾಕ್ಕೆ ₹ 40 ಲಕ್ಷ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ ಈಗ ₹ 80 ಲಕ್ಷಕ್ಕೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ಚಿತ್ರವೊಂದಕ್ಕೆ ತೆಲುಗಿನ ನಟಿಯರು ಪಡೆಯುವ ಸಂಭಾವನೆ

ನಯನಾ ತಾರಾ: ₹ 3 ಕೋಟಿಯಿಂದ ₹ 4 ಕೋಟಿ

ಅನುಷ್ಕಾಶೆಟ್ಟಿ:₹ 2 ಕೋಟಿಯಿಂದ ₹ 3 ಕೋಟಿ

ಕಾಜಲ್ ಅಗರ್‌ವಾಲ್‌: ₹ 2 ಕೋಟಿ

ಸಮಂತಾ: ₹ 2 ಕೋಟಿ

ತಮನ್ನಾ ಭಾಟಿಯಾ:₹ 2 ಕೋಟಿ

ಕೀರ್ತಿ ಸುರೇಶ್‌: ₹ 1 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.