ಟಾಲಿವುಡ್‌ನ ಸ್ಟಾರ್ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೊ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಶ್ಮಿಕಾ, ಅಭಿಮಾನಿಗಳಿಗಾಗಿ ಸಿನಿಮಾ, ಫಿಟ್ನೆಶ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಸಲ ಅವರುಫಿಟ್ನೆಶ್‌ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ರಶ್ಮಿಕಾ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.
ವಿಡಿಯೊದಲ್ಲಿನ ರಶ್ಮಿಕಾ ಎನರ್ಜಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. 24 ಸೆಂಕೆಡ್‌ಗಳ ವಿಡಿಯೊದಲ್ಲಿ ವಿವಿಧ ಭಂಗಿಯಲ್ಲಿ ರಶ್ಮಿಕಾ ವರ್ಕೌಟ್ ಮಾಡಿದ್ದಾರೆ. ಈ ಹಿಂದೆಯೂ ಸಹ ರಶ್ಮಿಕಾ ಫಿಟ್ನೆಶ್‌ಗೆ ಸಂಬಂಧಿಸಿದಂತೆ ಹಲವು ವಿಡಿಯೊ,ಫೋಟೊಗಳನ್ನು ಹಂಚಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ವರ್ಕೌಟ್ ಬಗ್ಗೆ ಟಿಪ್ಸ್ ನೀಡಿದ್ದರು.
ಸದ್ಯ ರಶ್ಮಿಕಾ ಅವರು ಟಾಲಿವುಡ್‌ನ ಮೂರು, ಬಾಲಿವುಡ್‌ನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ ನಾಯಕ ಪಾತ್ರದಲ್ಲಿ ನಟಿಸಿರುವ ‘ಮಿಷನ್ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಇದು ಅವರ ಮೊದಲ ಹಿಂದಿ ಸಿನಿಮಾ. ಜೂನ್ 10ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.