ಮುಂಬೈ: ಹಿಂದಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಎಂಟನೇ ಆವೃತ್ತಿ ಆರಂಭವಾಗಿದೆ. ಇದಕ್ಕೆ ಮೊದಲ ಅತಿಥಿಗಳಾಗಿ ಬಾಲಿವುಡ್ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಭಾಗವಹಿಸಿದ್ದಾರೆ.
ರಣವೀರ್ –ದೀಪಿಕಾ ಮದುವೆಯಾಗಿ ಐದು ವರ್ಷಗಳೇ ಕಳೆಯುತ್ತಿದೆ. (2018ರ ನವೆಂಬರ್ 14 ರಂದು ವಿವಾಹವಾಗಿದ್ದರು) ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮದುವೆಯ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ರಣವೀರ್ –ದೀಪಿಕಾ ಮದುವೆಯ ಮಧುರ ಕ್ಷಣಗಳ ವಿಡಿಯೊವನ್ನು The Wedding Filmer ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದೆ.
ಕಾರ್ಯಕ್ರಮದಲ್ಲಿ ದೀಪಿಕಾ ಹಾಗೂ ರಣವೀರ್ ಬದುಕಿನಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಹಾಗೂ ಮದುವೆಯಾದ ನಂತರದ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.
ದೀಪಿಕಾ ಸದ್ಯ ‘ಫೈಟರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.