ಏಳು ಕಥೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು ಒಂದು ಸಿನಿಮಾ...
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 70ರ ದಶಕದಲ್ಲಿ ನಾಲ್ಕು ಕಥೆಗಳ ‘ಕಥಾ ಸಂಗಮ’ ಸಿನಿಮಾ ನಿದೇಶಿಸಿ ದಾಖಲೆ ನಿರ್ಮಿಸಿದ್ದರು. ಈಗ ಅದೇ ಹೆಸರಿನಲ್ಲಿನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿಬಂದಿರುವ ‘ಕಥಾಸಂಗಮ’ ಸಿನಿಮಾದ ಟ್ರೇಲರ್ ಮತ್ತೊಂದು ದಾಖಲೆ ನಿರ್ಮಿಸುತ್ತಿದೆ.
ಇದೇ 4ರಂದುಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್ ಅವರು ಬಿಡುಗಡೆಯಾದ ಈ ಟ್ರೇಲರ್ ಅನ್ನು ಒಂದೇ ದಿನದಲ್ಲಿ 1 ಲಕ್ಷ ಮಂದಿ ವೀಕ್ಷಿಸಿದ್ದು, ಯೂಟ್ಯೂಬ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದೆ. 17 ಸಾವಿರ ಮಂದಿ ಇದನ್ನು ಲೈಕ್ ಮಾಡಿದ್ದು, ಅನೇಕರು ನಿರೀಕ್ಷೆ ಹುಟ್ಟಿಸುವಂತಹ ಟ್ರೇಲರ್ ಎಂದು ಕಮೆಂಟ್ ಮಾಡಿದ್ದಾರೆ.
ಪುಟ್ಟಣ್ಣ ಕಣಗಾಲ್ ಆರಂಭಿಸಿದ ಜಾನರ್‌ನಲ್ಲೇ ಸಾಗುವ ಈ ‘ಕಥಾ ಸಂಗಮ’ದಲ್ಲಿ ಏಳು ಸಣ್ಣ ಕಥೆಗಳಿವೆ. ಪ್ರೇಮ ಕಥೆ, ಥ್ರಿಲ್ಲರ್, ಕ್ರೈಂ, ಸಸ್ಪೆನ್ಸ್... ಹೀಗೆ ಒಂದೊಂದು ಕಥೆಗಳು ಒಂದೊಂದು ಸಿನಿಮಾ ನೋಡಿದ ಅನುಭವ ನೀಡುತ್ತವೆ ಎನ್ನುವುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ.ಉತ್ತರ ಕರ್ನಾಟಕ, ಬೆಂಗಳೂರು ಭಾಗ, ಮೈಸೂರು ಹಾಗೂ ಮಂಗಳೂರು ಭಾಗದ ಸೊಗಡಿನ ಸಂಭಾಷಣೆ ಈ ಸಿನಿಮಾದಲ್ಲಿದೆ.
ಒಂದೂವರೆ ವರ್ಷದ ಹಿಂದೆ ಈ ಚಿತ್ರ ನಿರ್ಮಾಣ ಶುರುವಾಗಿದ್ದು, ಈಗ ಪೂರ್ಣಗೊಂಡಿದೆ. ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಸಿಗುವುದನ್ನುಎದುರು ನೋಡುತ್ತಿದ್ದು, ನವೆಂಬರ್ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.
ಈ ಚಿತ್ರ ನಿರ್ಮಾಣಕ್ಕೆ ರಿಷಬ್ ಅವರಜತೆಗೆ ನಿರ್ಮಾಪಕರಾದ ಎಚ್.ಕೆ.ಪ್ರಕಾಶ್, ಪ್ರದೀಪ್ ಎನ್.ಆರ್. ಕೈಜೋಡಿಸಿದ್ದಾರೆ. ರಿಷಬ್ ಪರಿಕಲ್ಪನೆಯಲ್ಲಿನಿರ್ದೇಶಕರಾದ ಕಿರಣ್‌ರಾಜ್ ಕೆ., ಶಶಿಕುಮಾರ್ ಪಿ., ಚಂದ್ರಜಿತ್ ಎಲ್ಲಿಯಪ್ಪ, ರಾಹುಲ್ ಪಿ.ಕೆ., ಜೈಶಂಕರ್ ಎ., ಕರಣ್ ಅನಂತ್, ಜಮದಗ್ನಿ ಮನೋಜ್ ನಿರ್ದೇಶಿಸಿದ್ದಾರೆ.
ತಾರಾಗಣದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ, ಕಿಶೋರ್ ಕುಮಾರ್,ರಾಜ್ ಬಿ. ಶೆಟ್ಟಿ, ಯಜ್ಞಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಸೌಮ್ಯ, ಬಾಲಾಜಿ ಮನೋಹರ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.