ADVERTISEMENT

ರಿಷಿ ಕಪೂರ್‌ ಅಭಿನಯದ ಮರೆಯಲಾಗದ ಐದು ಸಿನಿಮಾಗಳು...

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 19:13 IST
Last Updated 30 ಏಪ್ರಿಲ್ 2020, 19:13 IST
ರಿಷಿ ಕಪೂರ್‌
ರಿಷಿ ಕಪೂರ್‌   
""
""
""

ಬೆಂಗಳೂರು: ಬಾಲಿವುಡ್‌ ಅಂಗಳದಲ್ಲಿ ಮರೆಯಲಾಗದ ಸಾಧನೆ, ವ್ಯಕ್ತಿತ್ವ ನೆನಪುಗಳನ್ನು ಬಿಟ್ಟು ಹೋಗಿರುವ ರೊಮ್ಯಾಂಟಿಕ್‌ ಮ್ಯಾನ್‌ ರಿಷಿ ಕಪೂರ್‌ ಅವರ ಬದುಕು ಕೂಡ ಬಣ್ಣದ ಜಗತ್ತಿನಂತೆಯೇ ವರ್ಣರಂಜಿತ.

ಪಕ್ಕಾ ಕಲಾವಿದರ ಕುಟುಂಬದಿಂದ ಬಂದಿದ್ದ ರಿಷಿ ಕಪೂರ್‌ 1970ರಲ್ಲಿ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಂದೆ ರಾಜ್‌ ಕಪೂರ್‌ ಅವರ ‘ಮೇರಾ ನಾಮ್‌ ಜೋಕರ್‌’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡು ರಾಷ್ಟ್ರಪ್ರಶಸ್ತಿ ಪಡೆದರು. ಅಲ್ಲಿಂದ ಅವರ ಸಿನಿ ಪಯಣ ಐದು ದಶಕಗಳ ಕಾಲ ವಿಜೃಂಭಿಸಿದರು.

ರಿಷಿ ಕಪೂರ್‌ ಸುಮಾರ್‌ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರೀಕರಣದ ಹಂತದಲ್ಲಿರುವ ‘ಶರ್ಮಾಜಿ ನಾಮ್‌ಕೀನ್‌’ ಅವರ ಕೊನೆಯ ಚಿತ್ರ

ADVERTISEMENT

ಬಾಬ್ಬಿ (1970)


ರಿಷಿ ಕಪೂರ್‌ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬ್ಬಿ. ಈ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಫಿಲಂ ಫೇರ್ ಅವಾರ್ಡ್‌ ಪಡೆದಿದ್ದಾರೆ. ಡಿಂಪಲ್‌ ಕಪಾಡಿಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ರಾಜ್ ಕಪೂರ್‌ ನಿರ್ದೇಶನದ ಈ ಚಿತ್ರಕ್ಕೆ ಖವಾಜಾ ಅಬ್ಬಾಸ್‌ ಕಥೆ, ಚಿತ್ರ ಕಥೆ ಬರೆದಿದ್ದರು.

ಶ್ರೀಮಂತ ವ್ಯಾಪಾರಿಯ ಮಗನ ಪಾತ್ರದಲ್ಲಿ ರಿಷಿ ಕಪೂರ್ ಕಾಣಿಸಿಕೊಂಡಿದ್ದರು. ಕ್ರೈಸ್ತ ಧರ್ಮದ ಬಡ ಯುವತಿ (ಡಿಂಪಲ್‌ ಕಪಾಡಿಯಾ)ಯನ್ನು ರಿಷಿ ಕಪೂರ್ ಪ್ರೀತಿಸುತ್ತಾರೆ. ಮದುವೆಗೆ ಎರಡು ಕುಟುಂಬಗಳಲ್ಲಿ ವಿರೋಧ ವ್ಯಕ್ತವಾಗುತ್ತದೆ. ಕೊನೆಗೆ ರಿಷಿ ಕಪೂರ್ ತಮ್ಮ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ಕಥಾ ಹಂದರ. ಮ್ಯೂಸಿಕಲ್‌ ಹಿಟ್‌ ಆಗಿದ್ದ ಈ ಸಿನಿಮಾ ವಿಮರ್ಶಕರ ಪ್ರಶಂಸೆಗೂ ಪಾತ್ರವಾಗಿತ್ತು.

ಹಮ್ ಕಿಸೀಸೆ ಕಮ್ ನಹೀ (1977)
ದು ಕೂಡ ಬಾಲಿವುಡ್‌ನ ಸೂಪರ್ ಹಿಟ್‌ ಸಿನಿಮಾ. ನಾಸೀರ್ ಹುಸೇನ್‌ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದಿತ್ತು. ಈ ಚಿತ್ರವುನಾಯಕಿ ಬಾಲ್ಯದ ಗೆಳೆಯನನ್ನು ಪ್ರೀತಿಸಿ ಮದುವೆಯಾಗುವ ಕಥೆಯನ್ನು ಒಳಗೊಂಡಿದೆ. ಮುಂದೆ ನಾಯಕ ಏನು ಮಾಡುತ್ತಾನೆ ಎಂಬುದು ಚಿತ್ರಕ್ಕೆಹೊಸ ತಿರುವು ಕೊಡುತ್ತದೆ.

ಅಮರ್ ಅಕ್ಬರ್ ಆಂಥೋಣಿ (1977)


ಇದೊಂದು ಆ್ಯಕ್ಷನ್‌, ಕಾಮಿಡಿ ಸಿನಿಮಾ. ಅಮಿತಾಬ್‌ ಬಚ್ಚನ್‌, ವಿನೋದ್‌ ಖನ್ನಾ ಜೊತೆ ರಿಷಿ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೌಟುಂಬಿಕ ಪ್ರತೀಕಾರದ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಮನಮೋಹನ್‌ ದೇಸಾಯಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕಿಯರಾಗಿ ಶಬಾನಾಅಜ್ಮಿ. ಪರವೀನ್‌ ಬಾಬ್ಬಿ, ನೀತು ಸಿಂಗ್‌ ನಟಿಸಿದ್ದಾರೆ.

ಕರ್ಜ್‌ (1980)
ಸಿನಿಮಾ ಕನ್ನಡದಲ್ಲಿ ಯುಗಪುರುಷ ಹೆಸರಿನಲ್ಲಿರೀಮೇಕ್‌‌ ಆಗಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕರ್ಜ್‌ ಸಿನಿಮಾದಲ್ಲಿ ಪತ್ನಿಯಿಂದ ಕೊಲೆಯಾಗುವ ನಾಯಕ ಪುನರ್‌ಜನ್ಮ ಪಡೆದು,ಪತ್ನಿಯನ್ನು ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಳ್ಳುವುದೇ ಚಿತ್ರದಥೆ.

ಸುಭಾಷ್‌‌ ಘಾಯ್‌ ನಿರ್ದೇಶನದ ಈ ಸಿನಿಮಾದಲ್ಲಿ ಟೀನಾ ಮುನೀಮ್‌‌ ನಟಿಸಿದ್ದಾರೆ. ಈ ಸಿನಿಮಾ ಬಾಲಿವುಡ್‌ನಲ್ಲಿ ಸೂಪರ್ ಹಿಟ್‌ ಆಗಿತ್ತು.

ಆಪ್‌ ಕೇ ದಿವಾನೇ (1980)
ಇದೊಂದು ತ್ರಿಕೋನ ಪ್ರೇಮಕಥೆ ಇರುವ ಸಿನಿಮಾ. ಶ್ರೀಮಂತ ಹುಡುಗಿಯನ್ನು ಇಬ್ಬರು ನಾಯಕರು ಪ್ರೀತಿಸುತ್ತಾರೆ. ಅಂತಿಮವಾಗಿ ನಾಯಕಿ ಯಾರಿಗೆ ಒಲಿಯುತ್ತಾಳೆ ಎಂಬುದೇ ಈ ಸಿನಿಮಾದ ಕಥೆ.

ಇದು ಕೂಡ ಮ್ಯೂಸಿಕಲ್‌ ಹಿಟ್‌ ಆಗಿದ್ದ ಸಿನಿಮಾ. ರಾಕೇಶ್‌ ರೋಶನ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಇನ್ನು ನಸೀಬ್‌, ಲೈಲಾ ಮಜ್ನು, ನಗೀನಾ, ಸಾಗರ್, ಚಾಂದಿನಿ, ದಾಮಿನಿ, ದೋ ದೂನಿ ಚಾರ್, ಡಿ-ಡೇ, ಅಗ್ನಿಪಥ್ಮೊದಲಾದ ಚಿತ್ರಗಳುಹಿಟ್‌ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.