ADVERTISEMENT

ನಟಿ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿ ಮಾತು: ಕೇರಳದ RMP ನಾಯಕನ ವಿರುದ್ಧ ಕೇಸ್

ಕೇರಳದ ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿ (RMP) ನಾಯಕ ಕೆ.ಎಸ್. ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಟಿಐ
Published 13 ಮೇ 2024, 7:01 IST
Last Updated 13 ಮೇ 2024, 7:01 IST
<div class="paragraphs"><p>ಮಂಜು ವಾರಿಯರ್</p></div>

ಮಂಜು ವಾರಿಯರ್

   

ತಿರುವನಂತಪುರ: ಮಲಯಾಳಂ ನಟಿ ಮಂಜು ವಾರಿಯರ್ ಹಾಗೂ ಸಿಪಿಐಎಂ ನಾಯಕಿ ಕೆಕೆ ಶೈಲಜಾ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೇರಳದ ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿ (RMP) ನಾಯಕ ಕೆ.ಎಸ್. ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಅವರ ವಿರುದ್ಧ ಐಪಿಸಿ ಸೆಕ್ಷನ್ 509 ಅಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಇತ್ತೀಚೆಗೆ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರಿಹರನ್ ಅವರು ಶೈಲಜಾ ಹಾಗೂ ಮಂಜು ವಾರಿಯರ್ ವಿರುದ್ಧ ಅವಹೇಳನಕಾರಿಯಾಗಿ (sexist remarks) ಮಾತನಾಡಿದ್ದರು. ಇದರಿಂದ ಸಿಪಿಐಎಂ ಕಾರ್ಯಕರ್ತರು ಕೆರಳಿ ಪ್ರತಿಭಟನೆ ನಡೆಸಿದ್ದಲ್ಲದೇ, ಭಾನುವಾರ ರಾತ್ರಿ ಹರಿಹರನ್ ಮನೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು.

ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಹರಿಹರನ್, ಪ್ರಕರಣ ದಾಖಲಾಗಿರುವುದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದಿದ್ದಾರೆ.

ರೆವೊಲ್ಯೂಷನರಿ ಮಾರ್ಕಿಸ್ಟ್ ಪಾರ್ಟಿಯ ಕೇಂದ್ರ ಮಂಡಳಿಯ ಸದಸ್ಯರಾಗಿ ಹರಿಹರನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಮಲಯಾಳಂ ಮೂಲದ ಮಂಜು ವಾರಿಯರ್ ಅವರು ತಮಿಳು, ತೆಲುಗು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಬಹುಬೇಡಿಕೆ ನಟಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.