ಎಸ್.ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‘ ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಹಾಲಿವುಡ್ ನಟ ರೇ ಸ್ಟೀವನ್ಸನ್ ತಮ್ಮ 58ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರೇ ಅವರ ಸಾವಿಗೆ ರಾಜಮೌಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ರೇ ಅವರ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ರಾಜಮೌಳಿ, ‘ಶಾಕಿಂಗ್.... ಈ ಸುದ್ದಿಯನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ರೇ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಸಂತೋಷದ ವಿಷಯವಾಗಿದೆ. ರೇ ಇಡೀ ಸೆಟ್‌ಗೆ ಒಂದು ರೀತಿಯ ಶಕ್ತಿ ಮತ್ತು ಚೈತ್ಯನ್ಯ ತುಂಬುತ್ತಿದ್ದರು. ಅವರ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ‘ ಎಂದು ಬರೆದುಕೊಂಡಿದ್ದಾರೆ.
‘ಆರ್‌ಆರ್‌ಆರ್ ಮೂವೀಸ್‘ ತಂಡವು ರೇ ಅವರ ಸಾವಿಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ‘ವಿಷಯ ತಿಳಿದು ಇಡೀ ತಂಡಕ್ಕೆ ಶಾಕ್ ಆಗಿದೆ. ನೀವು ಸದಾ ನಮ್ಮ ಹೃದಯದಲ್ಲಿ ಇರುತ್ತೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ‘ ಎಂದು ಹೇಳಿದೆ.
1964 ಮೇ 25ರಂದು ಉತ್ತರ ಐರ್ಲೇಂಡ್‌ನಲ್ಲಿ ಜನಿಸಿದ ರೇ ಸ್ಟೀವನ್ಸನ್ 1990ರಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಹಲವಾರು ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದರು. ಯುರೋಪಿಯನ್ ಕಿರುತೆರೆ ಸಾಕಷ್ಟು ಕೆಲಸ ಮಾಡಿದ ಅನುಭವ ರೇ ಅವರಿಗಿದೆ. ಅಲ್ಲದೇ ಮಾರ್ವೆಲ್ ಸಿನಿಮಾ ‘ಥಾರ್‘ನಲ್ಲಿಯೂ(Thor) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.