ADVERTISEMENT

ಮಾಸ್‌ ಸಿನಿಮಾಗಳ ಕೇರಾಫ್‌ ಅಡ್ರೆಸ್‌ ಬಾಲಯ್ಯ ಈಗ 'ರೂಲರ್‌'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 9:46 IST
Last Updated 10 ಡಿಸೆಂಬರ್ 2019, 9:46 IST
ಹೊಸ ಅವತಾರದಲ್ಲಿ ಬಾಲಕೃಷ್ಣ
ಹೊಸ ಅವತಾರದಲ್ಲಿ ಬಾಲಕೃಷ್ಣ   

ಹೈದರಾಬಾದ್‌: ತೆಲುಗಿನಲ್ಲಿ ಮಾಸ್‌ ಸಿನಿಮಾಗಳಿಗೆ ಕೇರಾಫ್‌ ಅಡ್ರಸ್‌ಅಂದ್ರೆಬಾಲಯ್ಯಅಲಿಯಾಸ್‌ನಂದಮೂರಿಬಾಲಕೃಷ್ಣ. ಈಬಾಲಯ್ಯಮತ್ತೊಂದು ಮಾಸ್‌ಸಿನಿಮಾಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬಾಲಯ್ಯ'ರೂಲರ್‌' ಆಗಿ ಬೆಳ್ಳಿ ತೆರೆಮೇಲೆಕಾಣಿಸಿಕೊಳ್ಳುತ್ತಿದ್ದಾರೆ. ರೂಲರ್‌ ಸಿನಿಮಾದ ಟ್ರೇಲರ್‌ ಸಾಮಾಜಿಕಜಾಲತಾಣಗಳಲ್ಲಿಸಿಕ್ಕಾಪಟ್ಟೆ ವೈರಲ್‌ ಆಗಿದೆ.ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದಟ್ರೇಲರ್‌ 25 ಲಕ್ಷಕ್ಕೂ ಹೆಚ್ಚುವ್ಯೂಗಳನ್ನುಪಡೆದಿದೆ. ಗ್ರಾಮೀಣ ಪ್ರದೇಶದ ಕಥಾ ಹಂದರ ಇರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕಕೆ.ಎಸ್‌.ರವಿಕುಮಾರ್‌ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆಬಾಲಯ್ಯಮತ್ತು ರವಿಕುಮಾರ್‌ ಜೋಡಿಯ ಜೈಸಿಂಹಚಿತ್ರ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು. ಇದೀಗ ರೂಲರ್‌ ಆಗಿ ಬೆಳ್ಳಿ ತೆರೆಆವರಿಸಿಕೊಳ್ಳಲ್ಲಿರುವಬಾಲಯ್ಯ ಅವರನ್ನುಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಬಹುದುಎಂಬುದನ್ನುಟ್ರೇಲರ್‌ ನೋಡಿದವರಿಗೆಅನ್ನಿಸಿದೆಇರದು.ರೈತರಕಷ್ಟುಸುಖಗಳಿಗೆ ಸ್ಪಂದಿಸುವ, ರೈತರ ಜಮೀನುಗಳನ್ನು ಕಾರ್ಪೋರೆಟ್‌ ದಲ್ಲಾಳಿಗಳಿಂದ ರಕ್ಷಣೆ ಮಾಡುವ ಒಂದುಪಾತ್ರ,ಪೊಲೀಸ್‌ ಅಧಿಕಾರಿಯಾಗಿ ಮತ್ತೊಂದುಪಾತ್ರದಲ್ಲಿಬಾಲಯ್ಯಕಾಣಿಸಿಕೊಂಡಿದ್ದಾರೆ.

ADVERTISEMENT

ಸಿ.ಕಲ್ಯಾಣ್‌ ಅವರುಹ್ಯಾಪಿಮೂವೀಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಮಾಡಿದ್ದಾರೆ.ಚಿರಂತನ್‌ ಭಟ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.ಬಹುದೊಡ್ಡ ತಾರಾಬಳಗ ಇರುವ ಈ ಸಿನಿಮಾದಲ್ಲಿಬಾಲಕೃಷ್ಣಗೆಜೋಡಿಯಾಗಿವೇದಿಕಾಮತ್ತು ಸೋನಾಲ್‌ ಚೌಹಾಣ್‌ ನಟಿಸಿದ್ದಾರೆ. ಮಾಸ್‌ಪ್ರೇಕ್ಷಕರಿಗಾಗಿಕೌಟುಂಬಿಕಎಳೆಯೊಂದನ್ನುಇಟ್ಟುಕೊಂಡು ಸಾಮಾಜಿಕವಾಗಿ ರೈತರನ್ನು ಕೇಂದ್ರವಾಗಿಟ್ಟುಕೊಂಡು ರವಿಕುಮಾರ್‌ಕಥೆಎಣೆದಿದ್ದಾರೆ ಎನ್ನಲಾಗಿದೆ.

ಮಾಸ್‌ಹಿರೋಆಗಿಬಾಲಯ್ಯಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದುವರೆಗೂ ಬಿಡುಗಡೆಯಾಗಿರುವ ಫಸ್ಟ್‌ಲುಕ್‌, ಟೀಸರ್‌ ಸಾಕಷ್ಟು ಹಿಟ್‌ ನೀಡಿದ್ದವು. ಇದೀಗ ಟ್ರೇಲರ್‌ ಕೂಡ ಸಾಮಾಜಿಕಜಾಲತಾಣಗಳಲ್ಲಿವೈರಲ್‌ ಆಗಿದೆ.ಬಾಲಯ್ಯಅವರ 105ನೇ ಚಿತ್ರ ಇದಾಗಿದೆ.

ಪ್ರಕಾಶ್‌ ರೈ,ಸಯ್ಯಾಜಿಶಿಂಧೆ,ಜಯಸುಧಾ,ಭೂಮಿಕಾ, ಪರಾಗ್‌ ತ್ಯಾಗಿ ,ರಘಬಾಬುಸೇರಿದಂತೆದೊಡ್ಡತಾರಬಳಗವೇಈಚಿತ್ರದಲ್ಲಿದೆ. ಹಾಸ್ಯನಟ ಸಪ್ತಗಿರಿ ಪ್ರೇಕ್ಷಕರಿಗೆ ಕಚಗುಳಿಕೊಡುವುದದಂತೂಸತ್ಯ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ,ಓಡಿಶಾಸೇರಿದಂತೆವಿಶ್ವದಾದ್ಯಂತ ಈಸಿನಿಮಾಡಿಸೆಂಬರ್‌ 20ರಂದು ತೆರೆ ಕಾಣಲಿದೆ.

ಈಸಿನಿಮಾಬಿಡುಗಡೆಯಾದ ಬಳಿಕ ಮತ್ತೊಂದು ಮಸಾಲೆಯುಕ್ತ ಮಾಸ್‌ ಸಿನಿಮಾದಲ್ಲಿ ನಟಿಸಲುಬಾಲಯ್ಯಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಬಾಯಪಾಟಿಸೀನು ನಿರ್ದೇಶನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.