ಹೈದರಾಬಾದ್: ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ,ತೆಲುಗಿನ ರಾನಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಟಾಲಿವುಡ್ನಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಜುಲೈ 1ರಂದು ತೆರೆಗೆ ಬರಲಿದೆ.
ಸಾಯಿಪಲ್ಲವಿ ಈ ಸಿನಿಮಾದಲ್ಲಿ ನಕ್ಸಲೈಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟನಾ ಸಾಮರ್ಥ್ಯ ಬೇಡುವ ಈ ಸಿನಿಮಾಗೆ ಆಕೆಯದ್ದು ಪ್ರಧಾನ ಪಾತ್ರ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ವೇಣು ಉಡುಗಾಲ ನಿರ್ದೇಶನದ ಈ ಸಿನಿಮಾದ ಪೋಸ್ಟರ್ಗಳು, ಟ್ರೈಲರ್ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ
ಸುರೇಶ್ ಪ್ರೊಡಕ್ಷನ್ ಮತ್ತು ಶ್ರೀಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ನಡಿ ಇದಕ್ಕೆ ಬಂಡವಾಳ ಹೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.