ಬಾಲಿವುಡ್‌ನಲ್ಲಿ ಫಿಟ್‌ನೆಸ್ ಕ್ರಾಂತಿ ಆರಂಭಿಸಿದ ಶ್ರೇಯ ನಟರಾದ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್‌ಗೆ ಸಲ್ಲುತ್ತದೆ. ‘ಸಾಜನ್’ ಚಿತ್ರದಲ್ಲಿ ಸಂಜಯ್ ಮತ್ತು ‘ಪ್ಯಾರ್ ಕೀಯಾ ತೋ ಡರನಾ ಕ್ಯಾ’ ಚಿತ್ರದಲ್ಲಿ ಸಲ್ಮಾನ್ ಜಿಮ್‌ನಲ್ಲಿ ಅಂಗಸೌಷ್ಠವ ಪ್ರದರ್ಶಿಸಿದರು. ಅದಾದ ನಂತರ ಜಿಮ್ ಹೊಕ್ಕು ದೇಹ ದಂಡಿಸಿದ ಬಾಲಿವುಡ್ ಯುವ ಪೀಳಿಗೆಗೆ ಲೆಕ್ಕವಿಲ್ಲ.
ರಾತ್ರಿ ಬೆಳಗಾಗುವುದರೊಳಗೆ ಮಾಂಸಖಂಡಗಳನ್ನು ಹುರಿಗೊಳಿಸುವ ಹುಕಿಗೆ ಬಿದ್ದ ಅನೇಕರು ಸ್ಟೆರಾಯ್ಡ್ ಮತ್ತು ಪ್ರೊಟೀನ್ ಪೌಡರ್ ಸೇವಿಸತೊಡಗಿದರು. ಇದು ಮಾಂಸಖಂಡಗಳನ್ನು ಹುರಿಗೊಳಿಸುವ ಜತೆಗೆ ಕಿಡ್ನಿ, ಲಿವರ್‌ಗೆ ಹಾನಿ ಮಾಡುತ್ತದೆ. ದೇಹದ ಮೇಲಾಗುವ ಅಡ್ಡ ಪರಿಣಾಮಗಳಿಗೆ ಲೆಕ್ಕವಿಲ್ಲ.
ಸಲ್ಮಾನ್ ರೀತಿ ದೇಹ ಬೆಳೆಸಿಕೊಳ್ಳಬೇಕು ಎಂಬ ಹುಕಿಗೆ ಬಿದ್ದ ಫಿಟ್‌ನೆಸ್ ಪ್ರಿಯರು ಜಿಮ್‌ನಲ್ಲಿ ಬೆವರಿಳಿಸುವ ಬದಲು ಸ್ಟೆರಾಯ್ಡ್ ಸೇವಿಸುವ ಗೀಳು ಅಂಟಿಸಿಕೊಂಡಿದ್ದಾರೆ. ಇದು ಸಲ್ಲು ಮಿಯಾಗೆ ಆತಂಕ ತಂದೊಡ್ಡಿದೆ.
‘ಪ್ರೊಟೀನ್ ಶೇಕ್ಸ್ ಸಪ್ಲಿಮೆಂಟ್ಸ್ ದೇಹಕ್ಕೆ ಒಳ್ಳೆಯದು. ಹಾಗಂತ ಸ್ಟೆರಾಯ್ಡ್ ಸೇವಿಸುವ ರಿಸ್ಕ್ ಬೇಡ. ಯುವಜನತೆಯಲ್ಲಿ ಹೆಚ್ಚುತ್ತಿರುವ ಈ ಪ್ರವೃತ್ತಿ ನಿಜಕ್ಕೂ ಒಳ್ಳೆಯ ಟ್ರೆಂಡ್ ಅಲ್ಲ. ಯಾವುದೇ ಕಾರಣಕ್ಕೂಸ್ಟೆರಾಯ್ಡ್ ಸೇವಿಸಬೇಡಿ’ ಎಂದು ಸಲ್ಮಾನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ದೇಹವನ್ನು ದಂಡಿಸಿ ನೈಸರ್ಗಿಕವಾದ ಬಾಡಿ ಬಿಲ್ಡ್ ಮಾಡಿ. ಕೊನೆಯವರೆಗೂ ಉಳಿಯುತ್ತದೆ. ಸ್ಟೀರಾಯ್ಡ್ಸ್ ಬಾಡಿ ತಕ್ಷಣ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಅದು ತಾತ್ಕಾಲಿಕ ಎಂದು ಸಲ್ಲುಮಿಯಾ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.