ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಚಿತ್ರದಲ್ಲಿ ‘ಊಅಂಟಾವಾ’ ಎಂಬ ಐಟಂ ಡ್ಯಾನ್ಸ್‌ನಲ್ಲಿ ಕುಣಿದು ಸುದ್ದಿಯಾಗಿದ್ದರು.
ಆದರೆ, ಸಮಂತಾ ಅವರ ಮಾದಕ ನೃತ್ಯಕ್ಕೆಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರು ವಿರೋಧದ ಮಾತುಗಳನ್ನು ಕೇಳುವ ಜತೆಗೆ ಟ್ರೋಲ್‌ಗೆ ಒಳಗಾಗಿದ್ದರು.
ಟೀಕೆಗಳಿಗೆಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರಿಸಿರುವ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ನಾನು ಉತ್ತಮವಾಗಿ ನಟನೆ ಮಾಡಿದ್ದೇನೆ, ಕೆಟ್ಟದಾಗಿಯೂ ನಟಿಸಿದ್ದೇನೆ, ಒಮ್ಮೊಮ್ಮೆ ತಮಾಷೆ, ಮಗದೊಮ್ಮೆ ಗಂಭೀರವಾಗಿರುತ್ತೇನೆ. ಚಾಟ್ ಶೋನ ನಿರೂಪಕಿಯೂ ಆಗಿದ್ದೆ. ಮಾಡುವ ಎಲ್ಲ ಕೆಲಸಗಳಲ್ಲೂ ಉತ್ತಮ ಸಾಧನೆ ಮಾಡಲು ನಾನು ನಿಜವಾಗಿಯೂ ಶ್ರಮಿಸುತ್ತೇನೆ.ಅದೇ ರೀತಿ, ಮಾದಕವಾಗಿ ಕಾಣುವುದು ಮುಂದಿನ ಹಂತದ ಪರಿಶ್ರಮವಾಗಿದೆ‘ ಎಂದು ಅವರು ಹೇಳಿದ್ಧಾರೆ.
ಸಮಂತಾ ಅವರ ಈ ನಿಲುವಿಗೆ ಅಭಿಮಾನಿಗಳುಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.