ADVERTISEMENT

ಗೋಪಿಯ ಶಾಲೆಯಲ್ಲಿ ಸಂಯುಕ್ತಾ ಟೀಚರ್‌!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 6:56 IST
Last Updated 8 ಫೆಬ್ರುವರಿ 2021, 6:56 IST
ಸಂಯುಕ್ತಾ ಹೊರನಾಡ್‌
ಸಂಯುಕ್ತಾ ಹೊರನಾಡ್‌   

ವಿಜ್ಞಾನ ಶಿಕ್ಷಕಿಯಾಗಿ ಬರುತ್ತಿದ್ದಾರೆ ಸಂಯುಕ್ತಾ ಹೊರನಾಡ್‌.

ವಿಡಂಬನೆ, ಹಾಸ್ಯ ವಿಷಯಾಧರಿತ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಡ್ಯಾನಿಷ್‌ ಸೇಟ್‌ ಅವರ ಹೊಸ ಚಿತ್ರ ‘ಒನ್‌ ಕಟ್, ಟು ಕಟ್‌’ನಲ್ಲಿ ಪಾಠ ಕಲಿಸಲು ಕೊನೆಗೂ ಟೀಚರ್‌ ಸಿಕ್ಕಿದ್ದಾರೆ. ಸಂಯುಕ್ತಾ ಹೊರನಾಡ್‌ ಈ ಚಿತ್ರದಲ್ಲಿ ವಿಜ್ಞಾನ ಶಿಕ್ಷಕಿ. ಗೋಪಿ ಪಾತ್ರ ಕೆಲಸ ಮಾಡುವ ಶಾಲೆಯಲ್ಲಿ ಅವರು ಶಿಕ್ಷಕಿಯಂತೆ. ‘ಗೋಪಿ’ ಆನ್‌ಲೈನ್‌ನಲ್ಲಿ ಈಗಾಗಲೇ ಖ್ಯಾತವಾಗಿರುವ ಸರಣಿ. ಈಗ ಅದೇ ವಸ್ತುವನ್ನಿಟ್ಟುಕೊಂಡು ವಂಶಿಧರ್‌ ಭೋಗರಾಜು ನಿರ್ದೇಶನದಲ್ಲಿ ‘ಒನ್‌ ಕಟ್‌, ಟು ಕಟ್‌’ ಮೂಡಿಬರುತ್ತಿದೆ. ಕಳೆದ ವಾರ ಈ ಚಿತ್ರ ಸೆಟ್ಟೇರಿದೆ.

2021ರಲ್ಲಿ ಚಿತ್ರೋದ್ಯಮ ಚೇತರಿಸಿಕೊಂಡಿರುವುದುಮತ್ತು ಹೊಸ ಅವಕಾಶಗಳು ಬರುತ್ತಿರುವುದು ಸಂಯುಕ್ತಾ ಅವರಿಗೆ ಖುಷಿ ತಂದಿದೆ. ‘ಡ್ಯಾನಿಷ್‌ ಮತ್ತು ವಂಶಿ ಅವರು ಸರಳ ವಿಷಯಗಳಲ್ಲಿ ಹಾಸ್ಯ ಹುಡುಕುತ್ತಾರೆ. ಜನರಿಗೆ ಸದ್ಯ ಅದೇ ಬೇಕಾಗಿದೆ. ಇಂಥ ವಿಶೇಷ ಕಥೆಯುಳ್ಳ ಸಿನಿಮಾದಲ್ಲಿ ಕೆಲಸ ಮಾಡುವುದು ನನಗೂ ಖುಷಿ ತಂದಿದೆ’ ಎನ್ನುತ್ತಾರೆ ಸಂಯುಕ್ತಾ.

ADVERTISEMENT

ಈ ಚಿತ್ರಕ್ಕ ಪುನೀತ್‌ ರಾಜ್‌ಕುಮಾರ್‌ ಅವರ ನೆರವೂ ಇದೆಯಂತೆ. ಹಾಗಾಗಿ ಈ ನಿರ್ಮಾಣ ತಂಡದಲ್ಲಿ ಕೆಲಸ ಮಾಡಲು ಬಯಸಿದ್ದೆಎಂದು ಖುಷಿ ಹಂಚಿಕೊಂಡರು ಸಂಯುಕ್ತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.