ಬೆಂಗಳೂರು: ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾದ ಆರೋಪಿ ವಿಶ್ವನಾಥ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
'ಪೈರಸಿ ಬಗ್ಗೆ ಉಮಾಪತಿ ಫಿಲ್ಮ್ಸ್ ವ್ಯವಸ್ಥಾಪಕ ಮಂಜುನಾಥ್ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.
'ಯಾದಗಿರಿಯ ವಿಶ್ವನಾಥ್, ಕೆ.ಆರ್. ರಸ್ತೆಯಲ್ಲಿ ವಾಸವಿದ್ದರು. ತಮ್ಮ ಬಳಿ ಸಿನಿಮಾ ಎಚ್.ಡಿ ಪ್ರಿಂಟ್ ಇರುವುದಾಗಿ ಹೇಳಿ, ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದೂರುದಾರ ಮಂಜುನಾಥ್, ಗ್ರಾಹಕರ ಸೋಗಿನಲ್ಲಿ ಆರೋಪಿಗಳ ಬಳಿ ಹೋಗಿ ವಿಚಾರಿಸಿದ್ದರು. ಅವರ ಬಳಿಯೂ ಆರೋಪಿ ಹಣ ಕೇಳಿದ್ದರು. ಕೂಡಲೇ ಆತನನ್ನು ಹಿಡಿದುಕೊಂಡ ದೂರುದಾರ, ಪೊಲೀಸರಿಗೆ ಒಪ್ಪಿಸಿದ್ದಾರೆ.'
'ಆರೋಪಿ ಮೊಬೈಲ್‌ನಲ್ಲಿ ಸಿನಿಮಾ ಪೈರಸಿ ಪ್ರತಿ ಸಿಕ್ಕಿದೆ. ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಜಾಲತಾಣಗಳಲ್ಲಿ ಪ್ರತಿ ಹಂಚಿಕೆ ಮಾಡಿರುವುದು ಗೊತ್ತಾಗಿದೆ' ಎಂದೂ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.