ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಹಿರಿಯ ನಟ ದೊಡ್ಡಣ್ಣ ಅವರು ಚಿಕಿತ್ಸೆಗಾಗಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯದ ಬಡಿತ ಇಳಿಕೆಯಾಗಿದ್ದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಪೇಸ್‌ಮೇಕರ್ ಅಳವಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ‘ಕೆಲ ದಿನಗಳಿಂದ ಅವರಿಗೆ ಸುಸ್ತು, ತಲೆಸುತ್ತು ಕಾಡುತ್ತಿದೆ ಎಂದು ಬುಧವಾರ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಇಸಿಜಿ ಮಾಡಿದ ವೇಳೆ ಹೃದಯದ ಬಡಿತ ಇಳಿಕೆಯಾಗಿರುವುದು ತಿಳಿಯಿತು. ಹೀಗಾಗಿ ಗುರುವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಿ ಪೇಸ್‌ಮೇಕರ್ ಅಳವಡಿಸಲಾಗಿದೆ. ಇದು ಹೃದಯಾಘಾತ ಅಲ್ಲ. ಮೂರು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ’ ಎಂದರು.
ಇದನ್ನೂ ಓದಿ... ಹೆಣ್ಣು ಮಕ್ಕಳನ್ನು ಗೌರವಿಸದವರು ರಾಕ್ಷಸರು: ನಟ ಜಗ್ಗೇಶ್ ಆಕ್ರೋಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.