ADVERTISEMENT

ಅಂದು ಮಗುವಂತೆ ಸಿಕ್ಕಳು, ಇಂದು ಅಮ್ಮನ ಸ್ಥಾನ ತುಂಬಿದಳು: ಪರಿಮಳಾಗೆ ಜಗ್ಗೇಶ್ ವಿಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 5:12 IST
Last Updated 28 ಅಕ್ಟೋಬರ್ 2021, 5:12 IST
ಜಗ್ಗೇಶ್ ಮತ್ತು ಪರಿಮಳಾ
ಜಗ್ಗೇಶ್ ಮತ್ತು ಪರಿಮಳಾ   

ಬೆಂಗಳೂರು: ನಟ ಜಗ್ಗೇಶ್ ಅವರು ಪತ್ನಿ ಪರಿಮಳಾ ಜಗ್ಗೇಶ್ ಅವರಿಗೆ ಟ್ವಿಟರ್‌ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪರಿಮಳಾ ಅವರು ಬುಧವಾರ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಜಗ್ಗೇಶ್‌ ತಮ್ಮ ಟ್ವಿಟರ್ ಖಾತೆಯಲ್ಲಿ ಪರಿಮಳಾ ಅವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘1982ರಲ್ಲಿ ಶ್ರೀರಾಮಪುರದ ಮುಖ್ಯ ರಸ್ತೆಯಲ್ಲಿ ಈಕೆ ನನ್ನ ಕಣ್ಣಿಗೆ ಬಿದ್ದಾಗ ನನಗೆ 14 ವರ್ಷ. ಇಂದಿಗೆ ಇವಳ ನನ್ನ ಭೇಟಿಗೆ 39 ವರ್ಷವಾಗಿದೆ. ಅಂದು ಮಗುವಂತೆ ಸಿಕ್ಕಳು ಇಂದು ಅಮ್ಮನ ಸ್ಥಾನ ತುಂಬಿದಳು. ಇಂದು ಮಡದಿಗೆ 53ನೇ ಹುಟ್ಟುಹಬ್ಬವಾಗಿದೆ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸದ್ಯ ಜಗ್ಗೇಶ್ ಅವರು ‘ತೋತಾಪುರಿ’, ‘ಪ್ರೀಮಿಯರ್ ಪದ್ಮಿನಿ –2’, ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇತ್ತ ಪರಿಮಳಾ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.