ಹೊಸಬರ ತಂಡವೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಎದುರಿಗೆ ಬಂದಿದೆ. ‘ಕಡಲ ತೀರದ ಭಾರ್ಗವ’ ಎಂಬ ಶೀರ್ಷಿಕೆಯ ಸಿನಿಮಾ ಇಂದು(ಮಾರ್ಚ್ 3) ತೆರೆಕಂಡಿದೆ.
ಹೀಗೆಂದ ಮಾತ್ರಕ್ಕೆ ಈ ಸಿನಿಮಾಗೂ ಶಿವರಾಮ ಕಾರಂತರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟಪಡಿಸಿದೆ ಚಿತ್ರತಂಡ.
‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇವೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳ ಒಂದು ಶಕ್ತಿಶಾಲಿ ಪಾತ್ರ. ಈ ವಸ್ತುಗಳ ಮಿಶ್ರಣವೇ ‘ಕಡಲತೀರದ ಭಾರ್ಗವ’... ಹೀಗೆಂದಿದೆ ಚಿತ್ರತಂಡ.
‘ವರುಣ್ ರಾಜು ಚಿತ್ರದ ನಾಯಕರಲ್ಲಿ ಒಬ್ಬರು. ಇಲ್ಲಿ ನಾಯಕನ ಪಾತ್ರದ ಹೆಸರು ಭಾರ್ಗವ. ಪರಶುರಾಮನ ಗುಣಲಕ್ಷಣಗಳನ್ನು ಆತ ಹೊಂದಿರುತ್ತಾನೆ’ ಎಂದಿದ್ದಾರೆ ನಿರ್ದೇಶಕ ಪನ್ನಗ ಸೋಮಶೇಖರ್.
ಭರತ್ ಗೌಡ, ಶ್ರುತಿ ಪ್ರಕಾಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.