ADVERTISEMENT

ನಟಿ ಸಂಜನಾ ಗಲ‍್ರಾನಿಗೆ ಮದುವೆಯಾಗಿದೆಯೇ, ಫೋಟೊದಲ್ಲಿರುವ ಈ ವ್ಯಕ್ತಿ ಯಾರು?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 15:06 IST
Last Updated 10 ಸೆಪ್ಟೆಂಬರ್ 2020, 15:06 IST
ವೈರಲ್‌ ಆಗಿರುವ ನಟಿ ಸಂಜನಾ ಗಲ‍್ರಾನಿ ಫೋಟೊ
ವೈರಲ್‌ ಆಗಿರುವ ನಟಿ ಸಂಜನಾ ಗಲ‍್ರಾನಿ ಫೋಟೊ   

ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಗುಟ್ಟಾಗಿ ಮದುವೆಯಾಗಿದ್ದಾರೆಯೇ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊವೊಂದು ಚರ್ಚೆಗೆ ವೇದಿಕೆ ಒದಗಿಸಿದೆ.

ಬಂಧನಕ್ಕೆ ಒಳಗಾಗುವ ಮೊದಲು ಮಾಧ್ಯಮದವರ ಮುಂದೆ ಮಾತನಾಡಿದ್ದ ಸಂಜನಾ, ‘ನನಗೆ ಇನ್ನೂ ವಿವಾಹವಾಗಿಲ್ಲ. ನನ್ನಂತಹ ಹುಡುಗಿಯ ಮೇಲೆ ಪ್ರಶಾಂತ್‌ ಸಂಬರಗಿ ಗಂಭೀರ ಆರೋಪ ಹೊರಿಸುತ್ತಿರುವುದು ಎಷ್ಟು ಸರಿ? ನನ್ನನ್ನು ಟಾರ್ಗೆಟ್‌ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲಾಗುತ್ತಿದೆ’ ಎಂದು ಅಳಲು ತೋಡಿಕೊಂಡಿದ್ದರು. ಈಗ ಡಾ.ಅಜೀಜ್‌ ಪಾಷಾ ಎಂಬುವರ ಜೊತೆಗೆ ಮದುವೆ ಡ್ರೆಸ್‌ನಲ್ಲಿಯೇ ಸಂಜನಾ ಕಾಣಿಸಿಕೊಂಡಿರುವ ಫೋಟೊ ವೈರಲ್‌ ಆಗಿದೆ.

ಸಂಜನಾ ವಧುವಿನ ಡ್ರೆಸ್‌ನಲ್ಲಿದ್ದಾರೆ. ಅವರ ಪಕ್ಕದಲ್ಲಿ ಕುಳಿತಿರುವ ಅಜೀಜ್‌ ಪಾಷಾ ಎಂಬುವರು ಕೊರಳಲ್ಲಿ ಹೂಮಾಲೆ ಹಾಕಿಕೊಂಡಿದ್ದಾರೆ. ಇಬ್ಬರೂ ವಧು–ವರನ ಉಡುಪು ತೊಟ್ಟು ಅಕ್ಕಪಕ್ಕದಲ್ಲೇ ಕುಳಿತಿದ್ದಾರೆ. ಥಟ್ಟನೆ ನೋಡಿದವರಿಗೆ ಈ ಇಬ್ಬರು ಮದುವೆಯಾಗಿರುವ ಫೋಟೊ ಇದಾಗಿದೆ ಎಂದು ಅನಿಸುತ್ತದೆ. ಈ ಇಬ್ಬರೂ ಲಿವ್ ಇನ್ ರಿಲೇಷನ್‌ನಲ್ಲೂ ಇದ್ದರು ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಈಗ ಹರಿದಾಡುತ್ತಿದೆ.

ADVERTISEMENT

ಆದರೆ, ಇದು ಈ ಇಬ್ಬರ ಮದುವೆ ಫೋಟೊವೇ ಅಥವಾ ಇಬ್ಬರಿಗೂ ಆಗದವರು ಫೋಟೊಶಾಪ್‌ನಲ್ಲಿ ಇಬ್ಬರ ಫೋಟೊವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಯೇ ಎಂಬ ಸಂದೇಹವೂ ಮೂಡುತ್ತದೆ.

ಪ್ರಸ್ತುತ ಸಂಜನಾ ಬಂಧನದಲ್ಲಿದ್ದಾರೆ. ಈ ಫೋಟೊ ಬಗ್ಗೆ ಸಂಜನಾ ಅಥವಾ ಅಜೀಜ್‌ ಪಾಷಾ ಎಂಬ ವ್ಯಕ್ತಿಯೇ ಉತ್ತರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.