ADVERTISEMENT

ಸಂಜಯ್‌ ಲೀಲಾ ಬನ್ಸಾಲಿಯೂ.. ಸೀರೆಗಳೂ...

ಪ್ರಜಾವಾಣಿ ವಿಶೇಷ
Published 8 ಜೂನ್ 2024, 0:38 IST
Last Updated 8 ಜೂನ್ 2024, 0:38 IST
<div class="paragraphs"><p>ಸ್ಮಿತಾ ಜಯ್ಕರ್‌</p></div>

ಸ್ಮಿತಾ ಜಯ್ಕರ್‌

   

ಕಣ್ಮುಂದೆ 25–30 ಸೀರೆಗಳ ರಾಶಿ ಇತ್ತು.. ನಿನಗೆ ಬೇಕಾದ ಸೀರೆ ಆಯ್ಕೆ ಮಾಡಿಕೊ ಎಂದು ಸಂಜಯ್‌ ಲೀಲಾ ಬನ್ಸಾಲಿ ಹೇಳಿದರು. ಒಂದಷ್ಟನ್ನು ಆಯ್ಕೆ ಮಾಡಿದೆ. ಈಗ ಇವುಗಳಿಂದ ನಿಮ್ಮ ಓಪ್ನಿಂಗ್‌ ಸೀನಿಗೆ ಯಾವ ಸೀರೆ ಬೇಕು ಎಂದು ಕೇಳಿದರು... 

ಸ್ಮಿತಾ ಜಯ್ಕರ್‌  ಅತಿ ಖುಷಿಯಿಂದ ತಮ್ಮ ಮತ್ತು ಸಂಜಯ್‌ ಲೀಲಾ ಬನ್ಸಾಲಿ ಅವರ ನಡುವೆ ನಡೆದ ಸಂವಾದದ ಬಗ್ಗೆ ಡಿಜಿಟಲ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ’ಹಮ್‌ ದಿಲ್‌ ದೇ ಚುಕೆ ಸನಮ್‌‘ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾದ ಸಂದರ್ಭದಲ್ಲಿ ಆ ಚಿತ್ರದ ಹಲವಾರು ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ.

ADVERTISEMENT

ಹಾಗೆ ಪ್ರತಿ ದೃಶ್ಯಕ್ಕೂ ಸೀರೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡುತ್ತಿದ್ದರು. ಜೊತೆಗೆ ಪ್ರತಿ ಪಾತ್ರಕ್ಕೂ ಸಮನಾದ ಮನ್ನಣೆ ನೀಡುತ್ತಿದ್ದರು. ಆಸಕ್ತಿ ತೋರುತ್ತಿದ್ದರು. ಒಮ್ಮೆ ನನ್ನ ಕೇಶವಿನ್ಯಾಸದಲ್ಲಿ ಚೂರು ವ್ಯತ್ಯಾಸವಾಗಿತ್ತು. ಕೆನ್ನೆಗೊಂದಷ್ಟು ಹೆಚ್ಚಿನ ಬಣ್ಣ ಸೋಕಿತ್ತು. ಅದನ್ನ ಸರಿಪಡಿಸಿದರು. 

ಪ್ರತಿಯೊಂದನ್ನೂ ಆಸಕ್ತಿಯಿಂದ ನೋಡುವುದು, ಗಮನಿಸುವುದು, ಸರಿಪಡಿಸುವುದು ಅವರ ಸ್ವಭಾವದಲ್ಲಿಯೇ ಇದೆ. ಸಂಗೀತದ ಮೇಲಿನ ಅವರ ಹಿಡಿತ ಅನನ್ಯವಾದುದು. ಚಿತ್ರವಿಡೀ ತಮ್ಮ ಹಿಡಿತದಲ್ಲಿರಿಸಿಕೊಳ್ಳುವುದು, ಪ್ರತಿಯೊಂದಕ್ಕೂ ಗಮನ ಕೊಡುವುದು ಅವರಿಂದ ಕಲಿಯಬೇಕಿದೆ. 

ಹಮ್‌ ದಿಲ್‌ ದೇ ಚುಕೆ ಸನಮ್‌ ಅವರೊಂದಿಗೆ ಮಾಡಿದ ಮೊದಲ ಚಿತ್ರವಾಗಿದೆ. ಅಷ್ಟು ಹೊತ್ತಿಗೆ ಅವರ ಖಾಮೋಶಿ ಚಿತ್ರ ಬಾಕ್ಸಾಫೀಸಿನಲ್ಲಿ ಸೋಲು ಕಂಡಿತ್ತು. ಆದರೆ ನನಗದು ಮೊದಲ ಚಿತ್ರ ಆಗಿದ್ದರಿಂದ ಧೈರ್ಯದಿಂದ ಒಪ್ಪಿಕೊಂಡೆ. ಐಶ್ವರ್ಯಾ ರೈ ಮತ್ತು ನಾನು ತೂಗು ಮಂಚದ ಮೇಲೆ ಮಾತಾಡುವ ದೃಶ್ಯ ಚಿತ್ರೀಕರಿಸಿದ್ದಂತೂ ಸುಂದರ ಕಾವ್ಯ ಹೆಣೆದಂತೆ ಇತ್ತು. ಈಗಲೂ ಆ ಚಿತ್ರದ ಹಾಡುಗಳು, ವೈಭವೋಪೇತ ದೃಶ್ಯಗಳು, ಚಂದದ ಸೀರೆಗಳು.. ಅವನ್ನೆಲ್ಲ ನೋಡಿದಾಗ, ನಾವೆಲ್ಲ ಬದುಕಿಬಂದಂತೆ ಎನಿಸುತ್ತವೆ ಎಂದು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.