ADVERTISEMENT

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಫೆ.25ಕ್ಕೆ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2022, 6:59 IST
Last Updated 28 ಜನವರಿ 2022, 6:59 IST
 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಪೋಸ್ಟರ್‌
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಪೋಸ್ಟರ್‌   

ಮುಂಬೈ: ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಫೆಬ್ರುವರಿ 25ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಪೆನ್‌ ಮೂವಿಸ್‌ ಪ್ರಕಟಿಸಿದೆ.

ಮುಂಬೈನ ಕಮಾಠಿಪುರದ ಗಂಗೂಬಾಯಿ ಕೋಠೆವಾಲಿ ಎಂಬ ಮಹಿಳೆಯ ಜೀವನದ ಕಥೆಯನ್ನು ಒಳಗೊಂಡಿರುವ ಹುಸೈನ್‌ ಜೈದಿ ಅವರ ಪುಸ್ತಕ 'ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈ' ಆಧರಿಸಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ನಿರ್ಮಿಸಲಾಗಿದೆ.

ಪ್ರತಿಷ್ಠಿತ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಮೊಟ್ಟ ಮೊದಲ ಪ್ರದರ್ಶನ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ADVERTISEMENT

ವೇಶ್ಯಾವಾಟಿಕೆ, ಅಲ್ಲಿನ ಪರಿಸರ ಮತ್ತು ಇಡೀ ಕಮಾಠಿಪುರವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಂಡಿರುವ ಮಹಿಳೆಯೇ ಗಂಗೂಬಾಯಿ. ಪೊಲೀಸ್‌, ಶಾಸಕ, ಸಂಸದ,...ಯಾರ ಮುಲಾಜಿಗೂ ಒಳಗಾಗದೆ ಗಟ್ಟಿಯಾಗಿ ನಿಂತು ತಾನು ನಂಬಿದ ವೃತ್ತಿಯಲ್ಲಿ ಮುಂದುವರಿಯುವ ಗಂಗೂಬಾಯಿಯೇ ಆಗಿದ್ದಾರೆ ಆಲಿಯಾ ಭಟ್‌.

ಸಿನಿಮಾದಲ್ಲಿ ಅಜಯ್‌ ದೇವಗನ್‌ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ಲೀಲಾ ಬನ್ಸಾಲಿ ಮತ್ತು ಡಾ.ಜಯಂತಿಲಾಲ್‌ ಗಾಡಾ ಚಿತ್ರವನ್ನು ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.