ಬೆಂಗಳೂರು: ಹೇಮಂತ್ ಎಂ.ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ರಕ್ಷಿತ್ ಶೆಟ್ಟಿ–ರುಕ್ಮಿಣಿ ವಸಂತ್ ಜೋಡಿ ತೆರೆಯಲ್ಲಿ ಮೋಡಿ ಮಾಡಿದ್ದು, ಸಿನಿಮಾ ಇತರೆ ಭಾಷೆಗಳಲ್ಲಿ ಡಬ್ ಆಗಿ ಪ್ರದರ್ಶನ ಕಾಣಲು ಸಜ್ಜಾಗುತ್ತಿದೆ.
ಇದೀಗ ಮನು–ಪ್ರಿಯಾ ನಡುವಿನ ನೀಲಿ ನೂಲಿನ ಪ್ರೇಮಕತೆ ತೆಲುಗುವಿನಲ್ಲಿ ತೆರೆಕಾಣುತ್ತಿದೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ: ಹಿಂದಿಯಲ್ಲಿ ರಕ್ಷಿತ್, ರುಕ್ಮಿಣಿ ಧ್ವನಿ
ಇದೇ 22 ರಂದು ‘ಸಪ್ತ ಸಾಗರಲು ದಾಟಿ’ ಎನ್ನುವ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಈ ಕುರಿತು ನಟ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಬಗೆಗಿನ ಪ್ರೇಮ ಕರ್ನಾಟಕದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ, ನಮ್ಮ ಸಿನಿಮಾ ಈಗ ಹೊಸ ರಂಗದಲ್ಲಿ ಹೃದಯಗಳನ್ನು ಸೆಳೆಯಲು ಸಜ್ಜಾಗಿದೆ! ಸೆಪ್ಟೆಂಬರ್ 22 ರಂದು ತೆಲುಗಿನಲ್ಲಿ ‘ಸಪ್ತ ಸಾಗರಲು ದಾಟಿ’ ಬಿಡುಗಡೆಯಾಗುತ್ತಿದೆ. ನಮ್ಮ ಪ್ರೀತಿಯ ತೆಲುಗು ಪ್ರೇಕ್ಷಕರೇ, ನಮ್ಮ ಪ್ರೀತಿಯ ಶ್ರಮವನ್ನು ನಿಮ್ಮ ಸ್ವಂತದ್ದೆಂದು ನೀವು ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇವೆ’ಎಂದು ಬರೆದುಕೊಂಡಿದ್ದಾರೆ.
ಸದ್ಯ, ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಸೈಡ್ –ಎ ಮಾತ್ರ ಬಿಡುಗಡೆಯಾಗಿದ್ದು, ಸೈಡ್– ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸೈಡ್ –ಎ ಜನರ ಮನ ಗೆದ್ದಿದೆ. ಸೈಡ್ –ಬಿ ತೆರೆಗೆ ಪ್ರೇಕ್ಷಕರು ಕಾದುಕುಳಿತಿದ್ದಾರೆ.
ಇದನ್ನೂ ಓದಿ: ಸಪ್ತಸಾಗರದಾಚೆ ಎಲ್ಲೋ ಟ್ರೇಲರ್: ರಕ್ಷಿತ್ ಶೆಟ್ಟಿಯ ನೀಲಿ ನೂಲಿನ ಪ್ರೇಮ ಕವಿತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.