ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಸಿನಿಮಾ ಮೇ 20ರಂದು ತೆರೆಕಾಣಲಿದೆ. ನಫೀಸಾ ಎಂಬ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಆರ್ನಾ ಸಾಧ್ಯ (ಶ್ವೇತಾ) ನಿರ್ದೇಶಿಸಿದ್ದಾರೆ.
ಹಾಜಿ - ಹಲೀಮ ದಂಪತಿಯ ಮಗಳು ನಫೀಸಾಳನ್ನು ಪಟ್ಟಣದ ಹುಡುಗನಿಗೆ ಕೊಟ್ಟು ಮದುವೆ ಮಾಡುವುದು, ಅವನು ಅವಳನ್ನು ನಿರ್ಲಕ್ಷಿಸುವುದು, ಕೊನೆಗೂ ಬರುವ ತಲಾಖ್, ಕೊನೆಗೂ ದೂರವಾಗುವ ತಾಯಿ ಮಗ... ಇದು ಚಿತ್ರದ ಒಂದು ಸಾಲಿನ ಕಥೆ. ಟ್ರೇಲರ್ ಈಗಾಗಲೇ ಮೆಚ್ಚುಗೆ ಗಳಿಸಿದೆ.
ತಲಾಖ್ ಬಗ್ಗೆ ವಿವರವಾಗಿ ಚರ್ಚಿಸಿರುವ ಸಿನಿಮಾ ಇದು. ಬದ್ರುದ್ದೀನ್ ಪಾತ್ರದಲ್ಲಿ ಪತ್ರಕರ್ತ ರೆಹಮಾನ್ ಹಾಸನ್ ನಟಿಸಿದ್ದಾರೆ. ರಮೇಶ್ ಭಟ್, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ, ವಿಭಾಸ್, ಸಾಯಿತೋಷಿತ್, ಅಂಕಿತಾ, ಆಯುಷ್ ಜಿ. ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಹಾಡುಗಳಲ್ಲಿ ಪತ್ರಕರ್ತ ಬಿ.ಎಂ ಹನೀಫ್ ಅವರ ಸಾಹಿತ್ಯವಿದೆ. ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಚಿತ್ರಕಥೆ-ಸಂಭಾಷಣೆಯನ್ನು ನರೇಂದ್ರಬಾಬು ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.