ADVERTISEMENT

ಟೀಸರ್‌ | 'ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ'ಯಲ್ಲಿ ಮೊಬೈಲ್ ಗೀಳಿನ 'ಸೃಜನ್' ಕಾಮಿಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:46 IST
Last Updated 26 ಫೆಬ್ರುವರಿ 2020, 12:46 IST
ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ ಚಿತ್ರದ ದೃಶ್ಯ
ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ ಚಿತ್ರದ ದೃಶ್ಯ   

ಬೆಂಗಳೂರು:‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಟೀಸರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾದ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಟೀಸರ್, ಇಲ್ಲಿಯವರೆಗೂ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾಸ್ಯಭರಿತವಾಗಿ ಮೊಬೈಲ್ ಗೀಳಿನಿಂದ ಜನರು ಹೊರ ಬರಬೇಕು ಎಂದು ಸಂದೇಶವನ್ನು ಸಾರುವ ಚಿತ್ರ ಇದಾಗಿದೆ.

ನಗರಗಳ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ಇದ್ದಾಗ, ಪುಟ್ಟ ಕಂದಮ್ಮಗಳ ಕೈಗಳು ಸಹಾಯ ಯಾಚಿಸುವುದುಂಟು. ಅವರು ಸ್ವಲ್ಪ ಕಾಸು ಅಥವಾ ಆಹಾರವನ್ನು ಕೇಳುತ್ತಾರೆ. ಆದರೆ, ಗುಂಡು ಮುಖದ, ಒಳ್ಳೊಳ್ಳೆ ಬಟ್ಟೆ ತೊಟ್ಟ ಪುಟಾಣಿಗಳು ತಮ್ಮ ಮೊಬೈಲ್‌ಗೆ ‘ಡೇಟಾ ಕೊಡಿ ಅಂಕಲ್, ಡೇಟಾ ಕೊಡಿ ಆಂಟಿ’ ಎಂದು ಕೇಳುತ್ತಾರೆ. ನಂತರ ಕತ್ತು ವಾಲಿಸಿಕೊಂಡವರ ಮದುವೆ ಸಂಭ್ರಮವು ಟೀಸರ್‌ನಲ್ಲಿದೆ. ತಿಥಿ ಖ್ಯಾತಿಯ ಸೆಂಚುರಿ ಗೌಡ ಹಾಗೂ ಬ್ರಹ್ಮಾಂಡ ಗುರೂಜಿಯ ಹಿನ್ನೆಲೆ ಧ್ವನಿಯೂ ಪ್ರೇಕ್ಷಕರಿಗೆ ಹೆಚ್ಚು ಆಪ್ತವಾಗುವಂತೆ ಮಾಡಿದೆ.

ADVERTISEMENT

ಮೊಬೈಲ್‌ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸಲು ‘ಪಲ್ಸ್‌ಮೊಲಿಯೊ‘ ಎಂಬ ಹನಿಯನ್ನು ಸಾರ್ವಜನಿಕರಿಗೆ ಹಾಕಲಾಗುವ ದೃಶ್ಯಯೂ ಕಚಗುಳಿ ಹಿಡುತ್ತದೆ. ಒಟ್ಟಾರೆಅಪ್ಪ–ಅಮ್ಮನಿಂದ ಆರಂಭವಾಗಿ ಚಿಕ್ಕ ಮಕ್ಕಳವರೆಗೂ ವ್ಯಾಪಿಸಿರುವ ಮೊಬೈಲ್‌ ಗೀಳಿನ ಕುರಿತಾದ ಸಿನಿಮಾವೇ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’.

ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಮಧುಚಂದ್ರ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ಒಟ್ಟು ನಲವತ್ತು ಜನ ಸೇರಿ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.