ADVERTISEMENT

ಎರಡನೇ ಮದುವೆಯಾದ ‘ಜೊತೆಜೊತೆಯಲಿ’ ಮೀರಾ ಖ್ಯಾತಿಯ ಮಾನಸ ಮನೋಹರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2024, 12:41 IST
Last Updated 7 ನವೆಂಬರ್ 2024, 12:41 IST
   

ಬೆಂಗಳೂರು: ಕನ್ನಡದ ಖ್ಯಾತ ಕಿರುತೆರೆ ನಟಿ ಮಾನಸ ಮನೋಹರ್ ಅವರು ಫುಟ್‌ಬಾಲ್‌ ಆಟಗಾರ ಪ್ರೀತಂ ಚಂದ್ರ ಅವರೊಂದಿಗೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ಮಾನಸ ಅವರಿಗೆ ಇದು ಎರಡನೇ ವಿವಾಹವಾಗಿದ್ದು, ಮೊದಲ ಗಂಡನಿಗೆ ವಿಚ್ಛೇದನ ನೀಡಿದ್ದರು.

ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿರುವ ಅವರು, ಮದುವೆಯ ಮಧುರ ಕ್ಷಣಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಕೊನೆಗೂ ನನ್ನ ಬಾಳಸಂಗಾತಿಯನ್ನು ನಾನು ಕಂಡುಕೊಂಡಿದ್ದೇನೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರ್ಶೀವದಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

‘ಜೊತೆಜೊತೆಯಲಿ’ ಧಾರಾವಾಹಿಯ ಮೀರಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಮಾನಸ ಅವರು ಸದ್ಯ ಲಕ್ಷ್ಮೀ ನಿವಾಸ, ಶಾಂಭವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.