ಬೆಂಗಳೂರು: ನಾಳೆ ಚಂದನವನದಲ್ಲಿ 9 ಸಿನಿಮಾಗಳು ತೆರೆಗೆ ಬರಲಿವೆ.ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಸಿನಿಮಾ ಕೂಡ ತೆರೆಗೆ ಬರಲಿದೆ.
ಅನು ಪ್ರಭಾಕರ್, ಪತ್ರಕರ್ತ ರೆಹಮಾನ್ ಹಾಸನ್, ರಮೇಶ್ ಭಟ್, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ, ವಿಭಾಸ್, ಸಾಯಿತೋಷಿತ್, ಅಂಕಿತಾ, ಆಯುಷ್ ಜಿ. ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಪತ್ರಕರ್ತ ಬಿ.ಎಂ. ಹನೀಫ್ ಅವರ ಸಾಹಿತ್ಯದ ಐದು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.ಆರ್ನಾ ಸಾಧ್ಯ (ಶ್ವೇತಾ) ಚಿತ್ರ ನಿರ್ದೇಶಿಸಿದ್ದಾರೆ.
ಇತರ ಸಿನಿಮಾಗಳು...
ಪ್ರಾರಂಭ:ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ – ಕೀರ್ತಿ ಕಲ್ಕೇರಿ ಅಭಿನಯದ ‘ಪ್ರಾರಂಭ’ ಚಿತ್ರ ಶುಕ್ರವಾರ ತೆರೆ ಕಾಣಲಿದೆ.ಮನು ಕಲ್ಯಾಡಿ ನಿರ್ದೇಶಕರು. ಸುರೇಶ್ ಬಾಬು ಛಾಯಾಗ್ರಹಣವಿದೆ. ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕರು.
ಟ್ವೆಂಟಿವನ್ ಅವರ್ಸ್: ಡಾಲಿ ಧನಂಜಯ, ರಾಹುಲ್ ಮಹದೇವ್, ಅಪೂರ್ವಾ ಭಾರಾದ್ವಾಜ್, ದುರ್ಗಾ ಕೃಷ್ಣ ಅಭಿನಯದ ಚಿತ್ರವಿದು. ಜೈಶಂಕರ್ ಪಂಡಿತ್ ನಿರ್ದೇಶಕರು.
ಗರುಡ: ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್ ಅಭಿನಯದ ಗರುಡ ಸಿನಿಮಾ ಸಹ ತೆರೆ ಕಾಣಲಿದೆ. ಕುಟುಂಬ ಹಾಗೂ ದೇಶಕ್ಕೆ ಮಾರಕವಾಗಿರುವ ಶಕ್ತಿಗಳ ವಿರುದ್ಧ ನಾಯಕನ ಹೋರಾಟ ಚಿತ್ರದ ಕಥೆ. ಧನಕುಮಾರ್ ಕೆ. ನಿರ್ದೇಶಕರು, ರಾಜ ರೆಡ್ಡಿ ನಿರ್ಮಾಪಕ.
ಸಕುಟುಂಬ ಸಮೇತ: ಆಧುನಿಕ ಕುಟುಂಬಗಳ ನಡುವಿನ ತೊಳಲಾಟ, ಪ್ರೇಮ-ವಿವಾಹ ಕುರಿತಾದ 'ಸಕುಟುಂಬ ಸಮೇತ' ಸಿನಿಮಾ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್ ಜಿಬಿ, ಶ್ರೀ ರವಿಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ರಾಹುಲ್ ಪಿ.ಕೆ. ನಿರ್ದೇಶನ ಮಾಡಿದ್ದಾರೆ.
ಕಟಿಂಗ್ ಶಾಪ್: ಎಡಿಟರ್ ಒಬ್ಬನ ಕತೆ ಹೊಂದಿರುವ 'ಕಟಿಂಗ್ ಶಾಪ್' ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಪ್ರವೀಣ್ ನಾಯಕನಾಗಿ ನಟಿಸಿದ್ದಾರೆ. ಪವನ್ ಭಟ್ ನಿರ್ದೇಶನ ಮಾಡಿದ್ದಾರೆ.
ಕಾಣೆಯಾದವರ ಬಗ್ಗೆ ಪ್ರಕಟಣೆ:'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ, ತಬಲಾ ನಾಣಿ, ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ್ ಕುಮಾರ್ ಅವರ ನಿರ್ದೇಶನವಿದೆ.
ದಾರಿ ಯಾವುದಯ್ಯ ವೈಕುಂಠಕ್ಕೆ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ "ಅತ್ಯುತ್ತಮ ಕನ್ನಡ ಚಿತ್ರ" ಪ್ರಶಸ್ತಿ ಪಡೆದಿದ್ದ 'ದಾರಿ ಯಾವುದಯ್ಯ ವೈಕುಂಠಕ್ಕೆ' ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನಸಿದ್ದು ಪೂರ್ಣಚಂದ್ರ ಅವರದ್ದು. ‘ತಿಥಿ ‘ಖ್ಯಾತಿಯ ಪೂಜಾ, ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ ಸೇರಿ ಇನ್ನೂ ಮುಂತಾದವರು ನಟಿಸಿದ್ದಾರೆ.
‘ಕಂಡ್ಡಿಡಿ ನೋಡಣ’:‘ಚಾಲೆಂಜಿಂಗ್ ಥ್ರಿಲ್ಲರ್ ಕಥಾಹಂದರದ ‘ಕಂಡ್ಡಿಡಿ ನೋಡಣ’ ಸಿನಿಮಾವು ರಾಜ್ಯದಾದ್ಯಂತ ಮೇ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಉತ್ತರ ಕರ್ನಾಟಕದ ಹೆಚ್ಚು ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ’ ಎಂದು ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಹೇಳಿದ್ದಾರೆ.ಪ್ರಣವ್ ಸೂರ್ಯ,ರಘು ವಡ್ಡಿ, ಕಲ್ಲಪ್ಪ ಶಿರಕೋಳ, ಆಕಾಶ್, ಅನು, ಮಂಜುನಾಥ್ ಹಾಗೂ ದಿವ್ಯಾ ನಟಿಸಿದ್ದಾರೆ.
ಈ ಚಿತ್ರಗಳು ಮಾತ್ರವಲ್ಲದೇ ಆ್ಯಂಗರ್ ಹಾಗೂ ಪ್ರೀತ್ಸು ಸಿನಿಮಾಗಳು ಕೂಡ ತೆರೆಗೆ ಬರಲಿವೆ ಎಂದು ಚಂದನವನದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.