ADVERTISEMENT

ಸೆಲೆಬ್ರಿಟಿಗಳ 'ಸೆಕ್ಸಿಸ್ಟ್' ಟ್ವೀಟ್: ವಿಚಾರ, ವಿರೋಧ ಮತ್ತು ವಿವಾದ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 15:41 IST
Last Updated 21 ಸೆಪ್ಟೆಂಬರ್ 2019, 15:41 IST
   

ಬೆಂಗಳೂರು: ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂಬ ಕಿಚ್ಚ ಸುದೀಪ್ ಟ್ವೀಟ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಬಳೆ ತೊಟ್ಟಿಲ್ಲ ಎಂಬ ವಾಕ್ಯ ಸೆಕ್ಸಿಸ್ಟ್ ಹೇಳಿಕೆ. ಈ ಬಗ್ಗೆ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ದನಿಯೆತ್ತಿದ್ದಾರೆ. ಅದೇ ವೇಳೆ ಸುದೀಪ್ ಟ್ವೀಟ್ ಪೈಲ್ವಾನ್ ಸಿನಿಮಾದ ಪೈರಸಿ ವಿಚಾರವೇ ಹೊರತುಮಹಿಳೆಯರನ್ನುದ್ದೇಶಿಸಿ ಅಲ್ಲ ಎಂಬ ಸಮಜಾಯಿಷಿ ಸುದೀಪ್ ಅಭಿಮಾನಿಗಳದ್ದು.

ಅಂದಹಾಗೆ ಸೆಲೆಬ್ರಿಟಿಗಳುಸೆಕ್ಸಿಸ್ಟ್ ಅಥವಾ ಸ್ತ್ರೀದ್ವೇಷಿ ಹೇಳಿಕೆ ನೀಡಿ ಸುದ್ದಿಯಾಗಿದ್ದುಇದೇ ಮೊದಲೇನೂ ಅಲ್ಲ.

ಪ್ರೀತಿಯಲ್ಲಿ ಕಪಾಳಮೋಕ್ಷ ಮಾಡಿದರೇನು ತಪ್ಪು? - ನಿರ್ದೇಶಕಸಂದೀಪ್ ರೆಡ್ಡಿ ವಂಗಾ

2019ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದಬಾಲಿವುಡ್ ಸಿನಿಮಾ ಕಬೀರ್ ಸಿಂಗ್. ತೆಲುಗು ಚಿತ್ರ ಅರ್ಜುನ್ ರೆಡ್ಡಿಯ ರಿಮೇಕ್ ಇದು.ಈ ಚಿತ್ರದಲ್ಲಿ ಕಬೀರ್ ಸಿಂಗ್‌ನ ಪಾತ್ರ ಸಿಕ್ಕಾಪಟ್ಟೆ ಚರ್ಚೆಗೊಳಗಾಗಿತ್ತು.ನಾಯಕ ನಾಯಕಿಯನ್ನು ಪ್ರೀತಿಸುತ್ತಿದ್ದರೂ ಹಿಂಸಿಸುತ್ತಲೇ ಇರುತ್ತಾನೆ. ಕಬೀರ್ ಸಿಂಗ್ ಹುಟ್ಟುಹಾಕಿದ ಚರ್ಚೆಬಗ್ಗೆ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಂದರ್ಶನವೊಂದರಲ್ಲಿ ಹೇಳಿದ ಮಾತು ಸೆಕ್ಸಿಸ್ಟ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದರು.

ವಂಗಾಹೇಳಿದ್ದೇನು?
ನೀವು ಒಬ್ಬ ಮಹಿಳೆ ಜತೆ ಗಾಢವಾದ ಪ್ರೀತಿಯನ್ನಿಟ್ಟುಕೊಂಡಿದ್ದರೆ (ಮಹಿಳೆಗೆ ಪುರುಷನ ಜತೆಗೆ ಇದೇ ರೀತಿಯ ಸಂಬಂಧವಿದ್ದರೆ) ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುವ ಸ್ವಾತಂತ್ರ್ಯ ಅಲ್ಲಿ ಇಲ್ಲದಿದ್ದರೆ ಆ ಸಂಬಂಧದಲ್ಲಿ ನಾನೂ ಏನನ್ನೂ ಕಾಣುವುದಿಲ್ಲ ಎಂದಿದ್ದರು.
ಅದೇ ವೇಳೆ ಸಿನಿಮಾವನ್ನು ವಿಮರ್ಶಿಸುವವರು ಸಿನಿಮಾ ರಂಗಕ್ಕೆ ಮಾರಕ ಎಂದು ಹೇಳಿದ್ದ ವಂಗಾ, ಅವರೆಲ್ಲರೂ ಫೆಮಿನಿಸ್ಟ್ , ಅವರು ಬೇರೆ ಏನನ್ನೂ ಮಾತನಾಡುವುದಿಲ್ಲ. ಬಹುಷಃ ಅವರು ಸರಿಯಾದ ರೀತಿಯಲ್ಲಿ ಪ್ರೀತಿಯನ್ನು ಅನುಭವಿಸಿಲ್ಲ ಎಂದಿದ್ದರು.

ಒಪ್ಪವಾಗಿ ಡ್ರೆಸ್ ಮಾಡುವವರು ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ: ಸಭ್ಯಸಾಚಿ
ಬಾಲಿವುಡ್ ನಟಿಯರ ಫೇವರಿಟ್ ವಸ್ತ್ರ ವಿನ್ಯಾಸಕ ಸಭ್ಯಸಾಚಿ ಮುಖರ್ಜಿ ಅವರ ಇನ್‌ಸ್ಟಾಗ್ರಾಂ ಪೋಸ್ಟೊಂದು ಸ್ತ್ರೀದ್ವೇಷಿ ನಿಲುವು ಹೊಂದಿದೆ ಎಂದು ನೆಟ್ಟಿಗರು ಟೀಕಿಸಿದ್ದರು.

ಪೋಸ್ಟ್‌ನಲ್ಲಿ ಏನಿದೆ?
ಮಹಿಳೆಯರು ಚೆನ್ನಾಗಿ ಉಡುಗೆ ತೊಟ್ಟು, ಮೇಕಪ್ ಮಾಡಿ, ಆಭರಣ ಧರಿಸಿದ್ದರೆ ಅಂತಾ ಮಹಿಳೆಯರಲ್ಲಿ ಹೆಚ್ಚಿನವರು ಒಳಗೊಳಗೆ ನೋವು ಅನುಭವಿಸುವವರಾಗಿರುತ್ತಾರೆ. ಮನಸ್ಸಿನೊಳಗೆ ವೇದನೆ ಸಹಿಸಿಕೊಂಡರೂ ಅವರು ಜಗತ್ತಿನ ಮುಂದೆ ತಮ್ಮ ವ್ಯಕ್ತಿತ್ವ ಮತ್ತು ಘನತೆಯನ್ನು ಎತ್ತಿಹಿಡಿಯುತ್ತಾರೆ ಎಂದು ಸಭ್ಯಸಾಚಿ ಪೋಸ್ಟಿಸಿದ್ದರು.

ಈ ಹಿಂದೆ 2018ರಲ್ಲಿ ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಮಾತನಾಡಿದ್ದ ಸಭ್ಯಸಾಚಿ, ಸೀರೆ ಉಟ್ಟುಕೊಳ್ಳಲು ಬರುವುದಿಲ್ಲ ಎಂದು ನೀವು ನನ್ನಲ್ಲಿ ಹೇಳಿದರೆ, ನಿಮಗೆ ನಾಚಿಗೆ ಆಗಲ್ವಾ ಎಂದು ನಾನು ಕೇಳುತ್ತೇನೆ. ಸೀರೆ ನಮ್ಮ ಸಂಸ್ಕೃತಿಯ ಭಾಗ ಅದನ್ನು ನಾವು ಅರಿತಿರಬೇಕು ಎಂದಿದ್ದರು.

ಸಭ್ಯಸಾಚಿ ಅವರು ನಾಚಿಕೆ ಆಗಲ್ವಾ ಎಂಬ ಪದ ಪ್ರಯೋಗ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ರೋಶ ವ್ಯಕ್ತವಾಗಿತ್ತು. ಆಕ್ರೋಶ ತೀವ್ರವಾಗುತ್ತಿದ್ದಂತೆಸಭ್ಯಸಾಚಿ ಇನ್‌ಸ್ಟಾಗ್ರಾಂ ಪೋಸ್ಟಿನಲ್ಲಿ ಕ್ಷಮೆ ಯಾಚಿಸಿದ್ದರು.

ಸಲ್ಮಾನ್ ಖಾನ್‌ನ ರೇಪ್ ಹೇಳಿಕೆ


ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ನಟಿಸಿದ ಸುಲ್ತಾನ್ ಸಿನಿಮಾ ಬಿಡುಗಡೆಯ ಹೊತ್ತಲ್ಲಿ ಸಲ್ಮಾನ್ ಖಾನ್‌ ಅವರ ಹೇಳಿಕೆ ಭಾರೀ ಟೀಕೆಗೊಳಗಾಗಿತ್ತು. ಸಿನಿಮಾ ಶೂಟಿಂಗ್ ಅನುಭವದ ಬಗ್ಗೆ ವಿವರಿಸಿದ ಸಲ್ಮಾನ್, ಕುಸ್ತಿಯ ದೃಶ್ಯವನ್ನು ಚಿತ್ರೀಕರಿಸುವಾಗ ನಾನು ಎಷ್ಟು ಸುಸ್ತಾಗುತ್ತಿದ್ದೆ ಎಂದರೆ ನಾನು ರಿಂಗ್‌ನಿಂದ ಹೊರ ಬರುವ ಹೊತ್ತಲ್ಲಿಅತ್ಯಾಚಾರಕ್ಕೊಳಗಾದ ಮಹಿಳೆಯಂತೆ ಆಗುತ್ತಿದ್ದೆ ಎಂದು ಹೇಳಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ ಎಂಬ ಈ ಪದ ಪ್ರಯೋಗದ ಬಗ್ಗೆ ನೆಟ್ಟಿಗರು ಮಾತ್ರವಲ್ಲ ಬಾಲಿವುಡ್ ಮಂದಿಯೂ ದನಿಯೆತ್ತಿದ್ದರು.

ಇವತ್ತು ನಾನು ಮಾಡಿ ಬಂದೆ ಎಂದ ಹಾರ್ದಿಕ್ ಪಾಂಡ್ಯ
ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ, ನಾನು ಹೆಣ್ಮಕ್ಕಳ ಸಂಗವನ್ನು ಇಷ್ಟಪಡುವುದಾಗಿ ಹೇಳಿದ್ದರು. ಆಮೇಲೆನಿರೂಪಕ ಕರಣ್, ಪಾಂಡ್ಯಅವರಲ್ಲಿ ಸೆಕ್ಸ್ ಲೈಫ್ ಬಗ್ಗೆ ಕೇಳಿದಾಗ, ನಾನು ಮೊದಲ ಬಾರಿ ಅದನ್ನು ಅದನ್ನು ಅನುಭವಿಸಿ ಮನೆಗೆ ಬಂದಾಗ ಹೆತ್ತವರ ಮುಂದೆ ಮೇ ಕರ್ ಕೇ ಆಯಾ ಹೈ ಆಜ್ (ಇವತ್ತು ನಾನು ಮಾಡಿಬಂದೆ) ಎಂದು ಹೇಳಿದ್ದೆ ಎಂದು ಉತ್ತರಿಸಿದ್ದರು.

ನೈಟ್ ಕ್ಲಬ್‌ಗಳಲ್ಲಿ ನೀವು ಮಹಿಳೆಯರ ಹೆಸರುಗಳನ್ನು ಯಾಕೆ ಕೇಳುವುದಿಲ್ಲ ಎಂದು ಕರಣ್ ಪ್ರಶ್ನೆ ಕೇಳಿದಾಗ, ಇಂತಾ ಪಾರ್ಟಿಗಳಲ್ಲಿ ನಾನು ಭೇಟಿಯಾಗುವ ಮಹಿಳೆಯರ ಹೆಸರು ನೆನಪಿಟ್ಟುಕೊಳ್ಳುವುದು ಕಷ್ಟ. ನಾನು ಅವರ ನಡಿಗೆಯನ್ನು ನೋಡಲು ಇಷ್ಟ ಪಡುತ್ತೇನೆ ಎಂದಿದ್ದರು.

ಹಾರ್ದಿಕ್ ಪಾಂಡ್ಯ ಮತ್ತುಕೆಎಲ್ ರಾಹುಲ್ ಈ ಚಾಟ್ ಶೋನಲ್ಲಿ ಭಾಗವಹಿಸಿದ್ದು, ಪಾಂಡ್ಯ ಅವರ ಸೆಕ್ಸಿಸ್ಟ್ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯುವ ಆಟಗಾರರಿಗೆ ಬಿಸಿಸಿಐ ದಂಡ ವಿಧಿಸಿತ್ತು.

ಐಶ್ವರ್ಯಾ ಮೀಮ್ ಟ್ವೀಟಿಸಿ ವಿವಾದಕ್ಕೀಡಾದ ವಿವೇಕ್ ಒಬೆರಾಯ್

2019 ಲೋಕಸಭಾ ಚುನಾವಣೆಯ ಸಂದರ್ಭ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿತ್ತು. ಮತಗಟ್ಟೆ ಸಮೀಕ್ಷೆ ಬಗ್ಗೆ ಹಲವಾರು ಮೀಮ್, ಟ್ರೋಲ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ಹೊತ್ತಲ್ಲಿ ನಟ ವಿವೇಕ್ ಒಬೆರಾಯ್ ಐಶ್ವರ್ಯಾ ರೈ ಫೋಟೊ ಬಳಸಿ ಟ್ವೀಟಿಸಿದ ಮೀಮ್ ಟೀಕೆಗೊಳಗಾಗಿತ್ತು.

ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನವನ್ನು ನಗೆಯಾಡುವ ಮೀಮ್ ಅದಾಗಿತ್ತು. ಒಪೀನಿಯನ್ ಪೋಲ್ ಎಂದು ಬರೆದು ಅಲ್ಲಿ ಐಶ್ವರ್ಯಾ ಸಲ್ಮಾನ್ ಖಾನ್ ಫೋಟೊ ಇದೆ. ಅದರ ಕೆಳಗೆ ಎಕ್ಸಿಟ್ ಪೋಲ್ ಎಂದು ಬರೆದು ವಿವೇಕ್ ಒಬೆರಾಯ್ ಮತ್ತು ಐಶ್ವರ್ಯಾ ಫೋಟೊ ಇದೆ. ಆಮೇಲೆ ರಿಸಲ್ಟ್ ಎಂದು ಬರೆದು ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಜತೆಗಿರುವ ಫೋಟೊ ಇದೆ. ಈ ಮೀಮ್ ಶೇರ್ ಮಾಡಿದ ವಿವೇಕ್ ಇದರಲ್ಲಿ ರಾಜಕೀಯ ಇಲ್ಲ, ಜೀವನ ಮಾತ್ರ ಎಂದು ಟ್ವೀಟಿಸಿದ್ದರು. ಈ ಮೀಮ್‌ಗೆ ಆಕ್ಷೇಪ ವ್ಯಕ್ತವಾಗುತ್ತಿದಂತೆ ವಿವೇಕ್ ಕ್ಷಮೆಯಾಚಿಸಿದ್ದರು.

ಕಿಲಾಡಿಅಕ್ಷಯ್ ಕುಮಾರ್
'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್'ಎಂಬ ಕಾರ್ಯಕ್ರಮದಲ್ಲಿ ಸಹ ತೀರ್ಪುಗಾರರಾಗಿದ್ದ ಮಲ್ಲಿಕಾ ದುವಾಅವರಲ್ಲಿಅಕ್ಷಯ್ ಕುಮಾರ್ ಹೇಳಿದ ಮಾತೊಂದು ಟೀಕೆಗೆ ಗುರಿಯಾಗಿತ್ತು.

ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಲ್ಲಿಕಾ ಜೀ ಆಪ್ ಬೆಲ್ ಬಜಾವೊ, ಮೇ ಆಪ್ ಕೊ ಬಜಾತಾ ಹೂಂ ಎಂದಿದ್ದರು. ಅಕ್ಷಯ್ ಕುಮಾರ್ ಅವರ ಈ ಮಾತಿಗೆ ಕಿಡಿ ಕಾರಿದ್ದ ಪತ್ರಕರ್ತ ವಿನೋದ್ ದುವಾ (ಮಲ್ಲಿಕಾ ಅವರ ಅಪ್ಪ) ಸಹೋದ್ಯೋಗಿ ಜತೆ ಈ ರೀತಿ ಮಾತನಾಡಿದ್ದು ಹಾಸ್ಯವೇ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನಿಸಿದ್ದರು. ಆ ಮೇಲೆ ಆ ಪೋಸ್ಟ್ ಡಿಲೀಟ್ ಮಾಡಿದ್ದರು.

ರಿಷಿ ಕಪೂರ್ ಟ್ವೀಟ್‌ಗೆ ತರಾಟೆ
2017 ಜುಲೈ 3 ರಂದು ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಸೆಕ್ಸಿಸ್ಟ್ ಟ್ವೀಟ್ ಸುದ್ದಿಯಾಗಿತ್ತು.
ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯದ ಹೊತ್ತಲ್ಲಿ ರಿಷಿ ಈ ರೀತಿ ಟ್ವೀಟ್ ಮಾಡಿದ್ದರು. ಲಂಡನ್ ಲಾರ್ಡ್ಸ್ ಗ್ರೌಂಡ್‌ನಲ್ಲಿ 2002ರಲ್ಲಿ ನಾಟ್‌ವೆಸ್ಟ್ ಸರಣಿಯಲ್ಲಿಭಾರತ ಇಂಗ್ಲೆಂಡ್‌ನ್ನು ಪರಾಭವಗೊಳಿಸಿದಾಗ ಸೌರವ್ ಗಂಗೂಲಿ ಮಾಡಿದುದೇ ಪುನಾರಾವರ್ತನೆ ಆಗಲಿ. ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಿರುವ ಫೋಟೊ ಶೇರ್ ಮಾಡಿದ್ದರು.

ರಿಷಿ ಕಪೂರ್ ಅವರ ಈ ತಮಾಷೆಯ ಟ್ವೀಟ್ ನೆಟ್ಟಿಗರನ್ನುಕೆರಳಿಸಿತ್ತು. ಮಿಥಾಲಿ ರಾಜ್ ಕೂಡಾ ಇದೇ ರೀತಿ ಶರ್ಟ್ ಬಿಚ್ಚಿ ಸಂಭ್ರಮಿಸಲಿ ಎಂದು ಕಾಯುತ್ತಿದ್ದೀರಾ? ನಿಮಗೇನಾಗಿದೆ ಎಂದು ಟ್ವೀಟಗರು ರಿಷಿ ಕಪೂರ್‌ನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹಾಸ್ಯವಲ್ಲ ಕಪಿಲ್ ಇದು ಅಪಹಾಸ್ಯ ಎಂದ ನೆಟ್ಟಿಗರು

ದಿ ಕಪಿಲ್ ಶರ್ಮಾ ಶೋ (ಕಾಮಿಡಿ ನೈಟ್ಸ್ ವಿತ್ ಕಪಿಲ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿತ್ತು)ನಲ್ಲಿ ನಿರೂಪಕ ಕಪಿಲ್ ಶರ್ಮಾ ಸೆಕ್ಸಿಸ್ಟ್ ಜೋಕ್‌ಗಳನ್ನು ಹೇಳುವುದು ಸಾಮಾನ್ಯವಾಗಿದೆ. ಈ ಬಗ್ಗೆಯೂ ನೆಟ್ಟಿಗರು ಆಕ್ಷೇಪ ವ್ಯಕ್ತ ಪಡಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕಪಿಲ್ ಪತ್ನಿಯಾಗಿ ನಟಿಸುವ ಸುಮೋನಾ ಚಕ್ರವರ್ತಿಯ ದೇಹದ ಬಗ್ಗೆ ಅಪಹಾಸ್ಯ (bodyshaming) ಮಾಡುವುದರ ಬಗ್ಗೆ, ಅಲ್ಲಿರುವ ಮಹಿಳಾ ಪಾತ್ರಗಳನ್ನು ಪೆದ್ದುಎಂಬ ಹಣೆಪಟ್ಟಿಯಿಂದ ಲೇವಡಿ ಮಾಡುವುದರ ಬಗ್ಗೆಯೂ ನೆಟ್ಟಿಗರು ಕಿಡಿ ಕಾರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.