ಮುಂಬೈ: ಬಾಲಿವುಡ್ ತಾರೆಗಳಾದ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರು ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಮದುವೆ ಸಮಾರಂಭವು ಖಾಸಗಿಯಾಗಿ ನೇರವೇರಿದ್ದು, ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.
ಈ ಸಮಾರಂಭದ ಚಿತ್ರವನ್ನು ಬಾಲಿವುಡ್ ನಟಿ ಶಬಾನಾ ಅಜ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫರ್ಹಾನ್ ಅಖ್ತರ್ ಅವರ ತಂದೆ ಹಾಗೂ ಹೆಸರಾಂತ ಗೀತರಚನೆಕಾರ ಜಾವೇದ್ ಅಖ್ತರ್ ಅವರಿಗೆ ಶಬಾನಾ ಅಜ್ಮಿ ಎರಡನೇ ಪತ್ನಿಯಾಗಿದ್ದಾರೆ.
ನವವಿವಾಹಿತರಿಗೆ ಶುಭ ಹಾರೈಸುತ್ತಿರುವುದಾಗಿ ಬರೆದುಕೊಂಡಿರುವ ಶಬಾನಾ ಅವರು ಶಿಬಾನಿ ದಾಂಡೇಕರ್ ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.
‘ಸಂತಸಭರಿತ ಕುಟುಂಬವು ಸುಂದರ ಶಿಬಾನಿಯನ್ನು ತನ್ನ ಮಡಿಲಿಗೆ ಸ್ವಾಗತಿಸುತ್ತಿದೆ’ ಎಂದು ಶಬಾನಾ ತಿಳಿಸಿದ್ದಾರೆ.
ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಜೋಡಿಯು ಕೆಲ ವರ್ಷಗಳಿಂದ ಪ್ರೇಮ ಸಂಬಂಧದಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.