ಬೆಂಗಳೂರು: ನಟ ಶಾರುಕ್ ಖಾನ್ ಅವರನ್ನು ನೇರವಾಗಿ ಭೇಟಿಯಾಗಬೇಕು, ಮಾತನಾಡಿಸಬೇಕು, ಸಾಧ್ಯವಾದರೆ ಒಂದು ಫೋಟೊ ತೆಗೆದುಕೊಳ್ಳಬೇಕು ಎಂದು ಅವರ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ.
ಪ್ರತಿ ವರ್ಷ ನವೆಂಬರ್ 2 ರಂದು ಶಾರುಕ್ ಅವರ ಬರ್ತಡೇ ದಿನ ಮುಂಬೈನ ಅವರ ಮನ್ನತ್ ನಿವಾಸದ ಎದುರು ಅನೇಕ ಅಭಿಮಾನಿಗಳು ದೂರದಿಂದಲೇ ಶಾರುಕ್ ಅವರನ್ನು ನೋಡಿ ವಾಪಸ್ ಹೋಗುತ್ತಾರೆ. ಭದ್ರತೆ ಹಾಗೂ ಕೆಲಸದ ಒತ್ತಡದಿಂದ ಎಲ್ಲ ಅಭಿಮಾನಿಗಳು ಭೇಟಿಯಾಗಲು ನಟನಿಗೆ ಸಾಧ್ಯ ಆಗುವುದಿಲ್ಲ.
ಆದರೆ, ಶಾರುಕ್ ಅವರ ‘ಡೈ ಹಾರ್ಡ್‘ ಅಭಿಮಾನಿಯೊಬ್ಬ ಮುಂಬೈಗೆ ಬಂದು ಬರೋಬ್ಬರಿ 95 ದಿನ ಅವರಿಗಾಗಿ ಕಾದು ಶಾರುಕ್ ಅವರನ್ನು ಭೇಟಿಯಾಗಿ ಮಾತನಾಡಿಸಿ ಫೋಟೊ ತೆಗೆಸಿಕೊಂಡು ಹೋಗಿದ್ದಾನೆ. ಶಾರುಕ್ ಅಭಿಮಾನಿಗಳ ಪೇಜ್ಗಳು ಈ ಫೋಟೊವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಜಾರ್ಖಂಡ್ನ ಶೇಖ್ ಮೊಹಮ್ಮದ್ ಅನ್ಸಾರಿ ಅವರು ಜಾರ್ಖಂಡ್ನಲ್ಲಿಯ ತಮ್ಮ ಬಟ್ಟೆ ಅಂಗಡಿಯನ್ನು ಬಂದ್ ಮಾಡಿ ಶಾರುಕ್ ಅವರನ್ನು ಭೇಟಿಯಾಗಲೆಂದೇ ಮುಂಬೈಗೆ ಬಂದಿದ್ದರು. ಆದರೆ, ಭೇಟಿ ಸಾಧ್ಯವಾಗಿರಲಿಲ್ಲ.
ಮನೆ ಬಳಿ ಕಾಯ್ದು ಕುಳಿತಿದ್ದ ವಿಚಾರ ತಿಳಿದು ಶಾರುಕ್ ಅವರು ಅನ್ಸಾರಿ ಅವರನ್ನು ಕರೆದು ಭೇಟಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.