ಮುಂಬೈ: ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಕ್ಕಾಗಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಬಿಡುಗಡೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.
ಈಗಾಗಲೇ ನಿಗದಿಯಾಗಿರುವಂತೆ ‘ಜೆರ್ಸಿ’ ಸಿನಿಮಾವು ‘ಕೆಜಿಎಫ್ ಚಾಪ್ಟರ್ 2’ ಜತೆಗೆ ಏಪ್ರಿಲ್ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾ ಬಿಡುಗಡೆ ಮುಂದೂಡಿಕೆ ಮಾಡಿರುವುದಾಗಿ ನಿರ್ಮಾಪಕ ಅಮನ್ ಗಿಲ್ ಹೇಳಿದ್ದಾರೆ.
ಇದನ್ನೂ ಓದಿ:ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ
‘ಒಂದು ತಂಡವಾಗಿ ನಾವು ‘ಜೆರ್ಸಿ’ಗಾಗಿ ಬೆವರು ಹರಿಸಿ ದುಡಿದಿದ್ದೇವೆ. ನಮ್ಮ ಪ್ರೀತಿಯ ಸಿನಿಮಾವು ನಿಮ್ಮೆಲ್ಲರನ್ನೂ ತಲುಪಬೇಕು ಎಂಬುದೇ ನಮ್ಮ ಬಯಕೆ. ಹೀಗಾಗಿ ಏಪ್ರಿಲ್ 22ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಿನಿಮಾವು 2019ರಲ್ಲಿ ಬಿಡುಗಡೆಯಾಗಿದ್ದ ಕ್ರಿಕೆಟ್ ಕಥಾ ಹಂದರವುಳ್ಳ ತೆಲುಗಿನ ‘ಜೆರ್ಸಿ’ ಸಿನಿಮಾದ ರಿಮೇಕ್. ನಟ ಶಾಹಿದ್ ಕಪೂರ್ ಅವರು ತೆಲುಗಿನ ನಾನಿ ಮಾಡಿದ್ದ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ಶಿವ ಸುಬ್ರಹ್ಮಣ್ಯಂ ನಿಧನ
ಈ ಚಿತ್ರದ ಟ್ರೈಲರ್ ಇತ್ತಿಚೆಗೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿತ್ತು. ಶಾಹಿದ್ ಕಪೂರ್ ಮಾತ್ರವಲ್ಲದೆ ಮೃಣಾಲ್ ಠಾಕೂರ್, ಪಂಕಜ್ ಕಪೂರ್ ಅವರು ಹಿಂದಿಯ ‘ಜೆರ್ಸಿ’ಯಲ್ಲಿ ಮುಖ್ಯ ತಾರಾಗಣದಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.