ADVERTISEMENT

ಜೂನ್ 23ಕ್ಕೆ ಸೋನಾಕ್ಷಿ–ಜಹೀರ್ ಮದುವೆ: ನಟಿಯ ತಂದೆ ಶತ್ರುಘ್ನ ಹೇಳಿದ್ದೇನು?

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2024, 10:37 IST
Last Updated 22 ಜೂನ್ 2024, 10:37 IST
<div class="paragraphs"><p>ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ.</p></div>

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ.

   

ನವದೆಹಲಿ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ. ಇದರ ನಡುವೆಯೇ ಈ ಮದುವೆಗೆ ಸೋನಾಕ್ಷಿ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಅವರು ಮಗಳು ಮಾತು ಕೇಳುತ್ತಿಲ್ಲ, ಈ ಮದುವೆ ನನಗೆ ಇಷ್ಟವಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ಈ ಎಲ್ಲ ಸುದ್ದಿಗಳಿಗೆ ಸ್ವತಃ ನಟ ಶತ್ರುಘ್ನ ಅವರೇ ತೆರೆ ಎಳೆದಿದ್ದಾರೆ.

ADVERTISEMENT

ಈ ಕುರಿತು ಟೈಮ್ಸ್ ನೌ ವಾಹಿನಿ ಜೊತೆ ಮಾತನಾಡಿರುವ ಅವರು, ಎಲ್ಲ ಮದುವೆಗಳಲ್ಲಿ ಮದುವೆ ಮೊದಲು ಅನೇಕ ಒತ್ತಡಗಳು ಇರುವುದು ಸಹಜ. ಹಾಗೇ ನಮ್ಮಲ್ಲೂ ಇತ್ತು. ಸದ್ಯ ಅದೆಲ್ಲ ತಿಳಿಯಾಗಿದ್ದು ಜೂನ್ 23 ರಂದು ನಡೆಯುವ ಮದುವೆಯಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಸೋನಾಕ್ಷಿ ಮದುವೆ ಬಗ್ಗೆ ನಾನೇನು ಹೇಳಿರಲಿಲ್ಲ. ಕೆಲ ಮಾಧ್ಯಮಗಳೇ ಊಹೆ ಮಾಡಿಕೊಂಡು ವರದಿ ಮಾಡಿವೆ. ಅದೆಲ್ಲ ಸಹಜ. ಏನೇ ಸಮಸ್ಯೆ ಇದ್ದರೂ ಅದೆಲ್ಲ ಈಗ ಬಗೆಹರಿದಿದೆ ಎಂದು ಹೇಳಿಕೊಂಡಿದ್ದಾರೆ.

ಈ ನಡುವೆಯೇ ಜಹೀರ್ ಇಕ್ಬಾಲ್ ಅವರ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸೋನಾಕ್ಷಿ ತಂದೆ–ತಾಯಿ ಭಾಗಿಯಾಗಿದ್ದರು ಎನ್ನಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸೋನಾಕ್ಷಿ ಅವರ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ವೆಬ್‌ ಸರಣಿ ಬಿಡುಗಡೆಗೊಂಡ ಬಳಿಕ ಮದುವೆಯ ಸುದ್ದಿ ಹೊರಬಿದ್ದಿತ್ತು.

ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಬಳಗ ಮಾತ್ರ ಭಾಗಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಆಗಿನಿಂದ ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಆದರೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.