ಮುಂಬೈ: ‘ನಮ್ಮ ಖಾಸಗಿತನವನ್ನು ಜನರು ಗೌರವಿಸಬೇಕು’ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮನವಿ ಮಾಡಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಡಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಬಂಧನಕ್ಕೊಳಗಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು,‘ ನನಗೆ ಮುಂಬೈ ಪೊಲೀಸ್ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ’ ಎಂದು ಹೇಳಿದ್ದಾರೆ.
‘ಒಂದು ಕುಟುಂಬವಾಗಿ, ನಾವು ಕಾನೂನು ಮೊರೆ ಹೋಗುತ್ತಿದ್ದೇವೆ. ನನ್ನ ಮಕ್ಕಳಿಗೋಸ್ಕರವಾದರೂ ಜನರು ನಮ್ಮ ಖಾಸಗಿತನವನ್ನು ಗೌರವಿಸಬೇಕು. ಒಬ್ಬಳು ತಾಯಿಯಾಗಿ ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಅಪೂರ್ಣ ಮಾಹಿತಿ ಬಗ್ಗೆ ಪ್ರತಿಕ್ರಿಯಿಸಬೇಡಿ’ ಎಂದು ಅವರು ಕೋರಿದ್ದಾರೆ.
‘ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಯಾವತ್ತೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಆದರೆ, ಈ ಪರಿಸ್ಥಿತಿಯಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಿ. ನಾವು 'ಮಾಧ್ಯಮ ವಿಚಾರಣೆ'ಗೆ ಅರ್ಹರಲ್ಲ. ದಯವಿಟ್ಟು, ಕಾನೂನಿಗೆ ಕೆಲಸ ಮಾಡಲು ಬಿಡಿ. ಸತ್ಯಮೇವ ಜಯತೇ’ ಎಂದು ಹೇಳಿದ್ದಾರೆ.
‘ನನ್ನ ಬಗ್ಗೆ ಮಾಧ್ಯಮಗಳು ಮತ್ತು ಕೆಲವರು ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೇವಲ ನನ್ನ ಬಗ್ಗೆ ಮಾತ್ರವಲ್ಲದೇ ನನ್ನ ಕುಟುಂಬದವರ ಬಗ್ಗೆಯೂ ಟ್ರೋಲಿಂಗ್ ಮತ್ತು ಹಲವು ಪ್ರಶ್ನೆಗಳನ್ನು ಮಾಡಲಾಗುತ್ತಿದೆ. ನಾನು ಈ ಪ್ರಕರಣದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ. ಹೇಳಿಕೆ ನೀಡಿಲ್ಲ. ಹಾಗಾಗಿ ನನ್ನ ಹೆಸರನ್ನು ಬಳಸಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.
ಇವನ್ನೂ ಓದಿ
*ಬದುಕನ್ನು ತಡೆಯಲು ಸಾಧ್ಯವಿಲ್ಲ: ಪತಿಯ ಬಂಧನದ ನಂತರ ಶಿಲ್ಪಾ ಶೆಟ್ಟಿ ಮೊದಲ ಪೋಸ್ಟ್
*ಅಶ್ಲೀಲ ಚಿತ್ರ ನಿರ್ಮಾಣ: ಬಂಗಾಳಿ ನಟಿನಂದಿತಾ ದತ್ತ ಬಂಧನ
*ಬ್ಲೂ ಫಿಲಂ: ₹15 ಲಕ್ಷ ಕೊಟ್ರೆ ಬಿಡ್ತೀವಿ ಎಂದಿದ್ದ ಪೊಲೀಸರು –ಗಹನಾ ವಶಿಷ್ಠ್
*ರಾಜ್ ಕುಂದ್ರಾರಿಂದ ಲೈಂಗಿಕ ದೌರ್ಜನ್ಯ: ನಟಿ ಶೆರ್ಲಿನ್ ಚೋಪ್ರಾ ಆರೋಪ
*ನೀಲಿ ಸಿನಿಮಾಗಳಲ್ಲಿ ತೊಡಗಿಕೊಂಡವರು ಕೆಟ್ಟವರಲ್ಲ: ನಟಿ ಸೋಮಿ ಅಲಿ
*ಪ್ಲಾನ್ ಬಿ ರೂಪಿಸಿದ್ದ ಕುಂದ್ರಾ: ಬರಲಿತ್ತು ಹೊಸ ಪೋರ್ನ್ ಅಪ್ಲಿಕೇಷನ್
*ಮುಂಬೈ ಟು ಲಂಡನ್... ಇದು ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.