ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರಗಳ ಹಬ್ಬ ಮತ್ತೆ ಬಂದಿದೆ. ಇದೇ 16ರಿಂದ 19ರವರೆಗೆ ಬನಶಂಕರಿಯ ಸುಚಿತ್ರ, ಇಂದಿರಾನಗರದ ಗೋಥೆ ಇನ್‌ಸ್ಟಿಟ್ಯೂಟ್ ಮತ್ತು ಚರ್ಚ್ ರಸ್ತೆಯ ಕೊಬಾಲ್ಟ್‌ನಲ್ಲಿ ಸುಮಾರು 200 ಕಿರುಚಿತ್ರಗಳು ಪ್ರದರ್ಶನ ಕಾಣಲಿವೆ. ಇದರ ಜೊತೆಗೆ ದೇಶ ವಿದೇಶದ ಕಿರುಚಿತ್ರ ಕ್ಷೇತ್ರದ ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಉದಯೋನ್ಮುಖ ಕಿರುಚಿತ್ರ ನಿರ್ದೇಶಕರಿಗೆ ಅನುಕೂಲವಾಗುವಂಥ ಮಾಸ್ಟರ್ ಕ್ಲಾಸ್‌ಗಳೂ ಇರಲಿವೆ.
ಆಗಸ್ಟ್ 16ರಂದು ಸಂಜೆ 5.30ಕ್ಕೆ ಉದ್ಘಾಟನಾ ಗೋಷ್ಠಿಯಲ್ಲಿ ‘ವೆಬ್ ಸೀರೀಸ್– ದ ನ್ಯೂ ವೇ ಆಫ್ ಫಿಲ್ಮ್ ಮೇಕಿಂಗ್’ ಕುರಿತು ಪ್ರಕಾಶ್ ಬೆಳವಾಡಿ, ಆರ್.ಜೆ. ಪ್ರದೀಪ, ರೂಪಾರಾವ್ ಮತ್ತು ನಾಗಭೂಷಣ್ ಚರ್ಚಿಸಲಿದ್ದಾರೆ. 7.15ಕ್ಕೆ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಡಾಡ್, ದ ಮ್ಯಾನ್ ಹೂ ಫರ್ಗಾಟ್ ಟು ಬ್ರೀತ್, ಕಂಪಂಗ್ ತಾಪಿರ್ ರೀಟಚ್ ಕಿರು ಚಿತ್ರಗಳ ಪ್ರದರ್ಶನವಿದೆ. ಸ್ಥಳ: ಪರದೆ 1, ಪುರವಂಕರ ಸೆಂಟರ್ ಫಾರ್ ಸಿನಿಮಾ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್, ಸುಚಿತ್ರ. ಸಂಜೆ 6.30ಕ್ಕೆ ಮಿಸ್ಚೀಫ್, ಅನಿವರ್ಸರಿ, ಡಾರ್ಜಿಲಿಂಗ್, ಹರ್ಸ್ ಟ್ರೂಲಿ, ನಿರ್ವಾಣ, ಶುಭಂ ಪ್ರದರ್ಶನ ಕಾಣಲಿದೆ. ಸ್ಥಳ:ಪರದೆ 2, ನಾನಿ ಅಂಗಳ, ಸುಚಿತ್ರ.
ಆಗಸ್ಟ್ 17ರಿಂದ 19ರವರೆಗೆ ಮೂರೂ ದಿನ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ವಿವರಗಳು www.bisff.in ನಲ್ಲಿ ಲಭ್ಯವಿದೆ. ಟಿಕೆಟ್ ದರ: ₹500, ವಿದ್ಯಾರ್ಥಿಗಳಿಗೆ ₹400. ಹೆಚ್ಚಿನ ಮಾಹಿತಿಗೆ 9986863615/ 9845055034 ಸಂಖ್ಯೆಗೆ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.