ನಟ ಶ್ರೇಯಸ್ ಕೆ. ಮಂಜುವಿನ ಹೊಸ ಚಿತ್ರ ‘ವಿಷ್ಣು ಪ್ರಿಯ’ ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಓಣಂ ಸಂದರ್ಭದಲ್ಲಿ ಶ್ರೇಯಸ್ ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಾಕಿಕೊಂಡು ಸುದ್ದಿಯನ್ನೂ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಿಯಾ ವಾರಿಯರ್ ಕೂಡ ಕಾಣಿಸಿಕೊಂಡಿದ್ದಾರೆ.
‘ನನ್ನ ಮುಂದಿನ ಚಿತ್ರ ವಿಷ್ಣು ಪ್ರಿಯ ದ್ವಿಭಾಷಾ ಚಿತ್ರವಾಗಿದ್ದು, ಮಲಯಾಳಂ ಚಿತ್ರದ ಮೊದಲ ಪೋಸ್ಟರ್ ಅನ್ನು ಓಣಂ ಸಂದರ್ಭದಲ್ಲಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ’ ಎಂದು ಅಡಿಬರಹ ಹಾಕಿಕೊಂಡಿದ್ದಾರೆ.
ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದು, ಗೋಪಿ ಸುಂದರ್ ಸಂಗೀತ ಕಂಪೋಸ್ ಮಾಡದ್ದಾರೆ. ಈ ಹಿಂದೆ ಶ್ರೇಯಸ್ ಸಹನಟಿಯೋದಿಗಿನ ಚಿತ್ರವನ್ನು ಶೇರ್ ಮಾಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಷ್ಣು ಪ್ರಿಯ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ಮೂಲಕ ನಟಿ ಪ್ರಿಯಾ ವಾರಿಯರ್ ಕನ್ನಡ ಸಿನಿಮಾಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸತ್ಯಕಥೆಯ ಮೇಲೆ ಚಿತ್ರ ನಿರ್ಮಾಣ ನಡೆದಿದ್ದು, ಘಟನೆ ನಡೆದಿದ್ದು 1990ರ ದಶಕದಲ್ಲಿ.
ಈ ಮಧ್ಯೆ ಶ್ರೇಯಸ್ ‘ಪಡ್ಡೆಹುಲಿ’ ಚಿತ್ರದಲ್ಲಿ ನಟಿಸಿದ್ದು, ನಾಗಶೇಖರ್ ನಿರ್ದೇಶನದ ‘ಕ್ಯೂ’ನಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಹಾಗೂ ಪೋಸ್ಟರ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಪೋಸ್ಟರ್‌ನ ಟ್ಯಾಗ್‌ಲೈನ್ ‘ಎ ಲವ್ ಸ್ಟೋರಿ ಆಫ್ ಎ ಕ್ವೀನ್’ ಅಭಿಮಾನಿಗಳು ಕಥೆಯ ಬಗ್ಗೆ ಯೋಚಿಸುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.