ADVERTISEMENT

ಸೈಮಾ ಪ್ರಶಸ್ತಿ; ಕನ್ನಡದಲ್ಲಿ ಯಾರಿಗೆ? ಇಲ್ಲಿದೆ ಪಟ್ಟಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 13:10 IST
Last Updated 11 ಸೆಪ್ಟೆಂಬರ್ 2022, 13:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಶನಿವಾರ ಬೆಂಗಳೂರಿನಲ್ಲಿ ನಡೆದಿದ್ದು ಅಲ್ಲು ಅರ್ಜುನ್‌ ಅಭಿನಯದ, ಸುಕುಮಾರ್‌ ನಿರ್ದೇಶನದ ‘ಪುಷ್ಪ ದಿ ರೈಸ್‌’(ತೆಲುಗು) ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ಇದೇ ಚಿತ್ರದ ಅಭಿನಯಕ್ಕಾಗಿ ನಟ ಅಲ್ಲು ಅರ್ಜುನ್‌ ಅವರು ಅತ್ಯುತ್ತಮ ನಟ, ನಿರ್ದೇಶಕ ಸುಕುಮಾರ್‌ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಯುವರತ್ನ ಚಿತ್ರಕ್ಕಾಗಿ ಮರಣೋತ್ತರವಾಗಿ ಉತ್ತಮ ನಾಯಕ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ನಗರದ ಅರಮನೆ ಆವರಣದಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಪ್ರಶಸ್ತಿ ಪಟ್ಟಿಯಲ್ಲಿ ಚಂದನವನ

ADVERTISEMENT

ತೆಲುಗು ಚಿತ್ರಗಳು
ಉತ್ತಮ ಚಿತ್ರ – ಪುಷ್ಪ ದಿ ರೈಸ್‌
ಉತ್ತಮ ನಾಯಕ ನಟ; ಅಲ್ಲು ಅರ್ಜುನ್‌; ಪುಷ್ಪ
ಉತ್ತಮ ನಾಯಕ ನಟ ವಿಮರ್ಶಕರ ಪ್ರಶಸ್ತಿ; ನವೀನ್‌ ಪೊಲಿಶೆಟ್ಟಿ; ಜಾತಿ ರತ್ನಾಲು
ಉತ್ತಮ ನಾಯಕಿ ನಟಿ; ಪೂಜಾ ಹೆಗ್ಡೆ; ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್‌
ಉತ್ತಮ ನಟಿ (ಮೊದಲ ಚಿತ್ರ); ಕೃತಿ ಶೆಟ್ಟಿ; ಉಪ್ಪೆನ
ಉತ್ತಮ ಪೋಷಕ ನಟ; ಜಗದೀಶ್‌ ಪ್ರತಾಪ್‌ ಭಂಡಾರಿ; ಪುಷ್ಪ
ಉತ್ತಮ ಪೋಷಕ ನಟಿ; ವರಲಕ್ಷ್ಮೀ ಶರತ್‌ ಕುಮಾರ್‌; ಕ್ರ್ಯಾಕ್‌
ಉತ್ತಮ ಹಾಸ್ಯನಟ; ಸುದರ್ಶನ್‌; ಏಕ್‌ ಮಿನಿ ಕಥ
ಉತ್ತಮ ನಿರ್ದೇಶಕ; ಸುಕುಮಾರ್‌; ಪುಷ್ಪ ದಿ ರೈಸ್‌
ಉತ್ತಮ ನಿರ್ದೇಶಕ(ಚೊಚ್ಚಲ ಚಿತ್ರಕ್ಕಾಗಿ): ಬುಚ್ಚಿ ಬಾಬು ಸನಾ; ಉಪ್ಪೆನ
ಉತ್ತಮ ಛಾಯಾಗ್ರಾಹಕ; ಸಿ.ರಾಮಪ್ರಸಾದ್‌; ಅಖಂಡ
ಉತ್ತಮ ಸಂಗೀತ ನಿರ್ದೇಶಕ; ದೇವಿಶ್ರೀ ಪ್ರಸಾದ್‌; ಪುಷ್ಪ ದಿ ರೈಸ್‌
ಉತ್ತಮ ಹಿನ್ನೆಲೆ ಗಾಯಕಿ; ಗೀತಾ ಮಾಧುರಿ ; ಅಖಂಡ (ಹಾಡು; ಜೈ ಬಾಲಯ್ಯ)
ಉತ್ತಮ ಹಿನ್ನೆಲೆ ಗಾಯಕ; ರಾಮ್‌ ಮಿರಿಯಾಲ; ಜಾತಿರತ್ನಾಲು ( ಹಾಡು; ಚಿಟ್ಟಿ)
ಉತ್ತಮ ಗೀತ ರಚನೆಕಾರ; ಚಂದ್ರಬೋಸ್‌; ಪುಷ್ಪ ದಿ ರೈಸ್‌ (ಹಾಡು: ಶ್ರೀವಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.