ADVERTISEMENT

ನಾಗಚೈತನ್ಯ–ಶೋಭಿತಾ ಮದುವೆ: ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2024, 13:27 IST
Last Updated 21 ಅಕ್ಟೋಬರ್ 2024, 13:27 IST
   

ಹೈದರಾಬಾದ್‌: ನಟ ನಾಗಚೈತನ್ಯ ಮತ್ತು ನಟಿ, ಮಾಡೆಲ್‌ ಶೋಭಿತಾ ಧೂಲಿಪಾಲ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ‘ಪಸುಪು ದಂಚತಾಂ’ ಆಚರಣೆಯೊಂದಿಗೆ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.

‘ಪುಸುವು ದಂಚತಾಂ’ ಒಂದು ವಿವಾಹ ಪೂರ್ವ ಸಾಂಪ್ರಾದಾಯಿಕ ಆಚರಣೆಯಾಗಿದ್ದು, ಗೋಧಿ, ಅರಿಶಿನವನ್ನು ಕಲ್ಲಿನ ಒರಳಿನಲ್ಲಿ ಹಾಕಿ ವಧು–ವರರು ಸೇರಿ ರುಬ್ಬಬೇಕು. ಇದು ಸಾಂಸಾರಿಕ ಜೀವನದ ಆರಂಭವನ್ನು ಸಂಕೇತಿಸುತ್ತದೆ. ಒಟ್ಟಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು, ಸಾಮರಸ್ಯದಿಂದ ಬದುಕು ಸಾಗಿಸುವುದು ಹೀಗೆ ಅನೇಕ ಅರ್ಥಗಳನ್ನು ಬಿಂಬಿಸುತ್ತದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಆಚರಣೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ADVERTISEMENT

ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಫೋಟೋಗಳನ್ನು ಹಂಚಿಕೊಂಡಿರುವ ಶೋಭಿತಾ, ‘ಗೋಧೂಮ ರಾಯಿ ಪಸುಪು ದಂಚತಾಂ(ಗೋಧಿ, ಅರಿಶಿನವನ್ನು ಕಲ್ಲಿನ ಒರಳಿನಲ್ಲಿ ರುಬ್ಬುವುದು)’ ಎಂದು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ.

ಸಾಂಪ್ರಾದಾಯಿಕ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿರುವ ಶೋಭಿತಾ ಅವರು, ಹಿರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.