ADVERTISEMENT

ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ‘ಸೊನಾಕ್ಷಿ‘ ದೊಡ್ಡ ನಟಿಯಾದರು! ಪೂಜಾ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2022, 6:49 IST
Last Updated 7 ಮೇ 2022, 6:49 IST
ಪೂಜಾ ಮಿಶ್ರಾ, ಸೋನಾಕ್ಷಿ ಸಿನ್ಹಾ
ಪೂಜಾ ಮಿಶ್ರಾ, ಸೋನಾಕ್ಷಿ ಸಿನ್ಹಾ   

ಮುಂಬೈ: ನನ್ನಕನ್ಯತ್ವವನ್ನುಮಾರಾಟಕಿಟ್ಟು ಬಾಲಿವುಡ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ದೊಡ್ಡ ನಟಿಯಾದರು ಎಂದು ರೂಪದರ್ಶಿ ಹಾಗೂ ಕಿರುತೆರೆ ನಟಿಪೂಜಾ ಮಿಶ್ರಾ ಆರೋಪ ಮಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿರುವಅವರು, ನನ್ನನ್ನು ಬೇರೆಯವರೊಂದಿಗೆ ಮಲಗಿಸಿ ಸೋನಾಕ್ಷಿ ದೊಡ್ಡ ನಟಿಯಾಗಿದ್ದಾರೆ, ಅವರ ಕುಟುಂಬ ಸಹ ನನಗೆ ಮೋಸ ಮಾಡಿದೆ ಎಂದು ಪೂಜಾ ಹೇಳಿದ್ದಾರೆ.

ನನ್ನ ತಂದೆ ಹಾಗೂ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಗೆಳೆಯರಾಗಿದ್ದರು. ಆದರೆ ಶತ್ರುಘ್ನ ಪತ್ನಿ ಪೂನಾಂ ಅವರು ಚಿತ್ರರಂಗಕ್ಕೆ ಬರುವವರು ವೇಶ್ಯೆರಾಗಿರಬೇಕು ಎಂದು ನನ್ನ ತಂದೆಯ ತಲೆಕೆಡಿಸಿದ್ದರು. ಈ ಕಾರಣಕ್ಕೆ ತಂದೆಯವರು ನನಗೆ ಸಿನಿಮಾರಂಗಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದಾಗಿಯೇ ನನಗೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಅವಕಾಶ ಕೈ ತಪ್ಪಿತುಎಂದು ಆರೋಪ ಮಾಡಿದ್ದಾರೆ.

ADVERTISEMENT

‘ಶತ್ರುಘ್ನ ಕುಟುಂಬದವರು ನನ್ನನ್ನು ಬೇರೆಯವರೊಂದಿಗೆ ಮಲಗಿಸಿಯೇಸೋನಾಕ್ಷಿಯನ್ನು ಮೊದಲ ಸಿನಿಮಾಗೆ ನಾಯಕಿ ಮಾಡಿದರು‘. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ, ಚಿತ್ರರಂಗದಲ್ಲಿ ಇದು ಮಾಮೂಲಿ, ನಿನಗೆ ಹೆಚ್ಚಿನ ಅವಕಾಶಗಳನ್ನು ಕೊಡಿಸುತ್ತೇವೆ‘ ಎಂದು ಪೂನಾಂ ಹೇಳಿದ್ದರು ಎಂದು ಪೂಜಾ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ.

ನಂತರದ ದಿನಗಳಲ್ಲಿ ಅವಕಾಶ ಕೊಡಿಸುವುದಾಗಿ ಸುಳ್ಳು ಹೇಳಿ ನನ್ನ ಕೆಟ್ಟದಾಗಿ ಬಳಸಿಕೊಂಡರು. ಆದರೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳನ್ನೇ ಕೊಡಲಿಲ್ಲ. ಆದರೆ ಅವರು ತಮ್ಮ ಮಗಳನ್ನು ದೊಡ್ಡದಾಗಿ ಬೆಳೆಸಿದರು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಪೂಜಾ ಮಿಶ್ರಾ ಹೇಳಿಕೆಗೆ ಸೋನಾಕ್ಷಿ ಸಿನ್ಹಾ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋನಾಕ್ಷಿ ಸಿನ್ಹಾ ಬಾಲಿವುಡ್‌ನಲ್ಲಿ ಹಲವಾರು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಪೂಜಾ ಮಿಶ್ರಾ ಕಿರುತೆಯಲ್ಲಿ ನಟಿಸುತ್ತಿದ್ದಾರೆ. ಅವರು ಮಾಜಿ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದಾರೆ. ಹಾಗೇ ಮಾಡೆಲಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.