ತುಂಬು ಗರ್ಭಿಣಿಯಾಗಿ ಫೋಟೊ ಶೂಟ್: ಪತಿಯೊಂದಿಗೆ ಜಗ ಮರೆತು ಸಂಭ್ರಮಿಸಿದ ದೀಪಿಕಾ
ಪ್ರಜಾವಾಣಿ ವೆಬ್ ಡೆಸ್ಕ್ Published 2 ಸೆಪ್ಟೆಂಬರ್ 2024, 14:37 IST Last Updated 2 ಸೆಪ್ಟೆಂಬರ್ 2024, 14:37 IST ನಟಿ, ತುಂಬು ಗರ್ಭವತಿ ದೀಪಿಕಾ ಪಡುಕೋಣೆ ಅವರು ಪತಿ ರಣವೀರ್ ಸಿಂಗ್ ಅವರೊಂದಿಗೆ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
ಜಗ ಮರೆತು ಪತಿಯೊಂದಿಗೆ ಸಂಭ್ರಮಿಸುತ್ತಿರುವ ದೀಪಿಕಾ, ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹರಡಿದ ಕೇಶ, ಪ್ರಶಾಂತ ನೋಟ, ಗುಳಿ ಬಿದ್ದ ಕೆನ್ನೆ, ಮೋಹಕ ನಗೆಯೆಲ್ಲವೂ ಕಪ್ಪು ಬಿಳುಪಿನ ಚಿತ್ರಗಳಲ್ಲಿ ಸೆರೆಯಾಗಿವೆ.
ದೀಪಿಕಾ ಪಡುಕೋಣೆ ಅವರು ತಾಯಿಯಾಗುತ್ತಿರುವ ಖುಷಿಯನ್ನು ಫೆಬ್ರುವರಿಯಲ್ಲಿ ಹಂಚಿಕೊಂಡಿದ್ದರು.
ಸಿನಿಮಾಗಳ ಪ್ರಚಾರಾರ್ಥ ಸಂದರ್ಶನಗಳಲ್ಲಿಯೂ ಗರ್ಭಾವಸ್ಥೆಯನ್ನು ಆನಂದಿಸುತ್ತಿರುವುದಾಗಿ ಹೇಳುತ್ತಿರುವ ದೀಪಿಕಾ ಪಡುಕೋಣೆ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದೀಪಿಕಾ ಅವರು ನಟ ಪ್ರಭಾಸ್ ಜೊತೆ ನಟಿಸಿರುವ 'ಕಲ್ಕಿ–2898 AD' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ₹ 1000 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
'ಕಲ್ಕಿ–2898 AD' ಸಿನಿಮಾ ಪ್ರಚಾರ ಸಭೆಗಳಲ್ಲೂ ಕಾಣಿಸಿಕೊಂಡಿದ್ದ ದೀಪಿಕಾ
ಅಜಯ್ ದೇವಗನ್ ಜೊತೆ ತೆರೆ ಹಂಚಿಕೊಂಡಿರುವ 'ಸಿಂಗಂ ಅಗೈನ್' ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
'ಸಿಂಗಂ ಅಗೈನ್' ಚಿತ್ರಕ್ಕೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
2018ರಲ್ಲಿ ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದ ದೀಪಿಕಾ ಮತ್ತು ರಣವೀರ್ ಸಿಂಗ್
ಸಂಭ್ರಮದಲ್ಲಿ ಮಿಂದೆದ್ದ ದೀಪಿಕಾ–ರಣವೀರ್
ದೀಪಿಕಾ ಮತ್ತು ರಣವೀರ್ ಇದೇ ತಿಂಗಳು ತಂದೆ–ತಾಯಿಯಾಗುವ ನಿರೀಕ್ಷೆ ಇದೆ.
ಬಾಲಿವುಡ್‌ನ ಈ ಸ್ಟಾರ್ ದಂಪತಿಗೆ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.