ಚೆನ್ನೈ:ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಮತ್ತು ನಟ, ಉದ್ಯಮಿ ವಿಶಾಗನ್ ಅವರ ವಿವಾಹ ಚೆನ್ನೈನ ಐಷರಾಮಿ ಹೋಟೆಲ್‌ನಲ್ಲಿ ಸೋಮವಾರ ನೆರವೇರಿತು.
ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ಹಿರಿಯ ನಟ ಕಮಲ್‌ಹಾಸನ್ ಸೇರಿದಂತೆ ಅನೇಕ ಗಣ್ಯರು ನವದಂಪತಿಗೆ ಶುಭಹಾರೈಸಿದರು.
ಉದ್ಯಮಿ ಅಶ್ವಿನ್ ಎಂಬುವರನ್ನು ಪ್ರೀತಿಸಿದ್ದ ಸೌಂದರ್ಯ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಶ್ವಿನ್ ಜೊತೆಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಅವರು, ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರವಾಗಿದ್ದರು. ಅವರಿಗೆ ಐದು ವರ್ಷದ ಮಗ ವೇದ್ ಸಹ ಇದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.