ADVERTISEMENT

ಖ್ಯಾತ ಚಲನಚಿತ್ರ ಸಾಹಿತಿ ಶ್ರೀರಂಗ ನಿಧನ

​ಪ್ರಜಾವಾಣಿ ವಾರ್ತೆ
Published 9 ಮೇ 2021, 16:32 IST
Last Updated 9 ಮೇ 2021, 16:32 IST
ಶ್ರೀರಂಗ
ಶ್ರೀರಂಗ   

ಬೆಂಗಳೂರು: ಖ್ಯಾತ ಚಲನಚಿತ್ರ ಸಾಹಿತಿ, ಸಂಭಾಷಣೆಗಾರ ಶ್ರೀರಂಗ ಅವರು ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ನಾಗರಬಾವಿಯಲ್ಲಿನ ಸ್ವಗೃಹದಲ್ಲಿ ವಯೋಸಹಜ ಕಾರಣದಿಂದ ಅವರು ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. 1974–75ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಅವರು, ಮೊದಲು ಸಿದ್ಧಲಿಂಗಯ್ಯ ಅವರ ನಿರ್ದೇಶನದ ‘ಭೂಲೋಕದಲ್ಲಿ ಯಮರಾಜ’ ಚಿತ್ರಕ್ಕೆ ಕಥೆ, ಹಾಡು, ಸಂಭಾಷಣೆ ಬರೆದಿದ್ದರು. ‘ನಂಜುಂಡಿ ಕಲ್ಯಾಣ’ ಚಿತ್ರದ ‘ಒಳಗೆ ಸೇರಿದರೆ ಗುಂಡು..’ ಹಾಡಿನಿಂದ ಶ್ರೀರಂಗ ಅವರು ಖ್ಯಾತಿ ಪಡೆದಿದ್ದರು. ‘ಭಂಗಿರಂಗ’ ಕಾವ್ಯನಾಮದಲ್ಲಿ ಅವರು ಹಾಡು ಬರೆಯುತ್ತಿದ್ದರು.

ಡಾ.ರಾಜ್‌ಕುಮಾರ್‌ ಹಾಗೂ ಅವರ ತಮ್ಮ ವರದಪ್ಪ ಅವರ ಒಡನಾಡಿಯಾಗಿದ್ದ ಶ್ರೀರಂಗ ಅವರು, ‘ಗಜಪತಿ ಗರ್ವಭಂಗ’ ಚಿತ್ರದಲ್ಲಿನ ‘ಜಟಕಾ ಕುದುರೆ ಹತ್ತಿ ಪ್ಯಾಟೆಹೋಗೊಮಾ’, ಆದಿತ್ಯ ಚಿತ್ರದಲ್ಲಿನ ‘ರಂಭೆ ನೀ ವೈಯಾರದ ರಂಭೆ’ ಸೇರಿದಂತೆನಟ ರವಿಚಂದ್ರನ್‌ ಅವರ ಅಂಜದ ಗಂಡು ಚಿತ್ರಕ್ಕೆ ಸಂಭಾಷಣೆ, ‘ಮೃತ್ಯುಂಜಯ’, ‘ಜನುಮದ ಜೋಡಿ’ ಚಿತ್ರ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರು ನಟಿಸಿದ ಅಭಿ ಚಿತ್ರದಲ್ಲಿ ‘ಸುಮ್‌ ಸುಮ್ನೆ ಓಳು ಬಿಡೊ ಸುಂದರಿ’, ‘ಅಪ್ಪು’ ಚಿತ್ರದಲ್ಲಿನ ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಸೇರಿದಂತೆ ಆಕಾಶ್‌, ವೀರ ಕನ್ನಡಿಗ ಸೇರಿದಂತೆಸುಮಾರು ಒಂದು ಸಾವಿರಕ್ಕೂ ಅಧಿಕ ಕನ್ನಡ ಚಲನಚಿತ್ರಗಳಿಗೆ ಹಾಡು ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.