ಮುಂಬೈ: ‘ಪಠಾಣ್’ ಚಿತ್ರದ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಚಿತ್ರೀಕರಣಕ್ಕೆ ಸಮಯ ನೀಡಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ಚಿತ್ರದ ಫೈಟ್ ದೃಶ್ಯಗಳು ಚಿತ್ರೀಕರಣಗೊಳ್ಳಲಿದ್ದು, ಅದಕ್ಕಾಗಿ ಶಾರುಖ್ 7 ದಿನಗಳನ್ನು ಮೀಸಲಿಟ್ಟಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.
ಹಿಂದಿ ಚಿತ್ರರಂಗದ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳ ಈ ಚಿತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಪಠಾಣ್’ಚಿತ್ರದ ಫೈಟ್‌ನಲ್ಲಿ ಕೂಡ ಸಲ್ಮಾನ್ ಖಾನ್ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಟೈಗರ್ ಚಿತ್ರವನ್ನು ಕೂಡ ಯಶ್‌ರಾಜ್ ಫಿಲಂಸ್ ನಿರ್ಮಿಸುತ್ತಿದೆ. ಹೀಗಾಗಿ ಖಾನ್ ಜೋಡಿ ಮತ್ತೆ ಫೈಟ್‌ನಲ್ಲಿ ಒಂದಾಗುತ್ತಿದೆ.
‘ಪಠಾಣ್’ನಲ್ಲಿ ಶಾರುಖ್–ಸಲ್ಮಾನ್ ಆ್ಯಕ್ಷನ್‌ಗೆ ಪ್ರೇಕ್ಷಕರು ಸಂತಸಗೊಂಡಿದ್ದರು. ಹೀಗಾಗಿ ಯಶ್‌ರಾಜ್ ಫಿಲಂಸ್, ಟೈಗರ್–3ನಲ್ಲಿ ಅದಕ್ಕಿಂತ ದೊಡ್ಡದಾದ ಫೈಟ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಆಲೋಚಿಸಿದೆ. ಅದಕ್ಕಾಗಿಯೇ ಶಾರುಖ್ ಅವರಿಂದ 7 ದಿನಗಳ ಕಾಲ್‌ಶೀಟ್ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.
'ಟೈಗರ್ 3' ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಮುಖ್ಯಭೂಮಿಯಲ್ಲಿರುವ ಚಿತ್ರ. ಈ ವರ್ಷ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ. ಫ್ಯಾನ್ ಚಿತ್ರ ನಿರ್ದೇಶಿಸಿದ್ದ ಮನೀಶ್ ಶರ್ಮಾ ಈ ಚಿತ್ರದ ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.