ADVERTISEMENT

ನನ್ನ ಕಥೆಗಳಿಗಷ್ಟೇ ನಾನು ಗುಲಾಮ: ಎಸ್.ಎಸ್.ರಾಜಮೌಳಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 0:13 IST
Last Updated 3 ಆಗಸ್ಟ್ 2024, 0:13 IST
<div class="paragraphs"><p>ಎಸ್.ಎಸ್.ರಾಜಮೌಳಿ</p></div>

ಎಸ್.ಎಸ್.ರಾಜಮೌಳಿ

   

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಖ್ಯಾತ ನಿರ್ದೇಶಕ ಎಸ್.ಎಸ್‌.ರಾಜಮೌಳಿಯವರ ಕುರಿತ ‘ಮಾಡರ್ನ್‌ ಮಾಸ್ಟರ್ಸ್‌: ಎಸ್.ಎಸ್.ರಾಜಮೌಳಿ ಎಂಬ ಸಾಕ್ಷ್ಯಚಿತ್ರದ ಟ್ರೈಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಬೀದಿಯಲ್ಲಿ ನಡೆದುಕೊಂಡು ಹೋಗುವ ದೃಶ್ಯದ ಮೂಲಕ ರಾಜಮೌಳಿ ಅವರ ಸಿನಿ ಜರ್ನಿ ತೋರಿಸುವಂತೆ ಆರಂಭವಾಗುವ ಟ್ರೈಲರ್‌ನಲ್ಲಿ  ‘ತಮ್ಮ ಕತೆಗಳಿಗೆ ತಾವೇ ಗುಲಾಮರಾಗಿರುವ’ ಬಗ್ಗೆ ಹೇಳಿಕೊಂಡಿದ್ದಾರೆ. ‘ನನ್ನ ಕತೆಗಳಿಗಷ್ಟೇ ನಾನು ಗುಲಾಮ. ನಾನು ಅತ್ಯದ್ಭುತ ಕತೆ ಹೇಳಲು ಬಯಸುತ್ತೇನೆ, ಅಭಿಮಾನಿಗಳನ್ನು ಸಿನಿಮಾದಲ್ಲಿ ಹೂಡಿಕೆ ಮಾಡುವಂತೆ ಮಾಡುವುದೇ ನನ್ನ ಗುರಿ’ ಎಂದು ಹೇಳಿದ್ದಾರೆ. 

ADVERTISEMENT

ರಾಜಮೌಳಿ ಅವರ ಪ್ರಸಿದ್ಧ ಸಿನಿಮಾ, ಬಾಹುಬಲಿಯ ನಟ ಪ್ರಭಾಸ್‌ ಅವರು ತೆರೆಯಮೇಲೆ ಕಾಣಿಸಿಕೊಂಡು ‘ಇದುವರೆಗೆ ನಾನು ರಾಜಮೌಳಿ ತರದವರನ್ನು ಭೇಟಿಯಾಗಿಲ್ಲ. ಅವರರೊಬ್ಬ ಸಿನಿಮಾದ ಹುಚ್ಚಿರುವ ಮನುಷ್ಯ ಅಷ್ಟೇ’ ಎನ್ನುತ್ತಾ,  ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 

ಅವರ ಇನ್ನೊಂದು ಪ್ರಸಿದ್ಧ ಸಿನಿಮಾ ಆರ್‌ಆರ್‌ಆರ್‌ನಲ್ಲಿ ಕಾಣಿಸಿಕೊಂಡಿದ್ದ ನಟ ಜೂನಿಯರ್‌ ಎನ್‌ಟಿಆರ್‌ ಅವರು ನಿರ್ದೇಶಕರ ನಿರ್ಣಯದ ಬಗ್ಗೆ ಮಾತನಾಡುತ್ತಾ, ‘ಅವರು ಸಿನಿಮಾ ಮಾಡಲೆಂದೇ ಹುಟ್ಟಿದ್ದಾರೆ. ಇದುವರೆಗೂ ಹೇಳದ ಕತೆಗಳನ್ನು ಅವರು ಹೇಳಲು ಹೊರಟಿದ್ದಾರೆ. ಅವರೊಬ್ಬ ಹುಚ್ಚ, ಅವರೊಂದಿಗೆ ವಾದಮಾಡಿ ಯಾವುದೇ ಪ್ರಯೋಜನವಿಲ್ಲ. ಅವರು ನಟರಿಂದ ಏನು ಕೇಳುತ್ತಾರೋ, ಅದನ್ನು ನಟರು ಅವರಿಗೆ ಕೊಡಬೇಕಷ್ಟೇ’ ಎನ್ನುತ್ತಾರೆ. 

‘‘ಕೆಲವೊಮ್ಮೆ ನನಗೆ ಅಚ್ಚರಿಯಾಗುತ್ತದೆ. ಅವರ ಜೊತೆ ಕೆಲಸ ಮಾಡಿದ ಸಿನಿಮಾಗಳನ್ನು ವೀಕ್ಷಿಸುವಾಗ, ನಾನೂ ಮೂರನೇ ವ್ಯಕ್ತಿಯಾಗಿ ಬದಲಾಗಿರುತ್ತೇನೆ’’ ಎಂದು ಆರ್‌ಆರ್‌ಆರ್‌ ಸಿನಿಮಾದ ಮತ್ತೊಬ್ಬ ನಟ ರಾಮ್‌ ಚರಣ್ ರಾಜಮೌಳಿಯವರನ್ನು ಹೊಗಳಿದ್ದಾರೆ. 

 ನಂತರ ಬರುವ ನಿರ್ಮಾಪಕ ಕರಣ್ ಜೋಹರ್ ಅವರು ಈಗಾಗಲೇ ಲೆಜೆಂಡ್‌, ಸಿನಿಮಾ ರಂಗದ ಸಾಧಕರ ಸಾಲಿನಲ್ಲಿ ಅವರಿದ್ದಾರೆ’ ಎಂದಿದ್ದಾರೆ. 

ಆ ವಿಡಿಯೊದಲ್ಲಿ ಆರ್‌ಆರ್‌ಆರ್‌ ಹಾಗೂ ಬಾಹುಬಲಿ ಸಿನಿಮಾಗಳ ಶಾಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿನ ಕ್ಲಿಪ್‌ನಲ್ಲಿ ‘ತನ್ನ ಕೆಲಸದಲ್ಲಿ ಮಾಸ್ಟರ್, ಸಿನಿಮಾ ರಂಗದ ಸಾಧಕ, ನಿರ್ದೇಶಕ ಎಸ್‌.ಎಸ್‌.ರಾಜಮೌಳಿಯವರ ಸ್ಟೂಡೆಂಟ್ ನಂಬರ್‌ 1ನಿಂದ ಆರ್‌ಆರ್‌ಆರ್‌ವರೆಗಿನ ಜರ್ನಿ ವೀಕ್ಷಿಸಿ’ ಎಂದಿದೆ. 

ನೆಟ್‌ಫ್ಲಿಕ್ಸ್‌ನವರು ಅಪ್ಲಾಸ್‌ ಎಂಟರ್‌ಟೈನ್‌ಮೆಂಟ್‌ ಹಾಗೂ ಫೀಲ್ಮ್‌ ಕಂಪಾನಿಯನ್‌ ಸ್ಟುಡಿಯೋಸ್‌ ಜೊತೆಗೂಡಿ ‘ಮಾಡರ್ನ್‌ ಮಾಸ್ಟರ್ಸ್: ಎಸ್‌.ಎಸ್‌. ರಾಜಮೌಳಿ‘ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದು, ಆಗಸ್ಟ್‌ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.