ADVERTISEMENT

ಜಪಾನ್ ಮಹಿಳೆಯರ 110 ವರ್ಷದ ನಾಟಕ ಕಂಪನಿಯಿಂದ RRR ಚಿತ್ರ ಸಂಗೀತ ನಾಟಕಕ್ಕೆ!

‘ತಕರಾಜುಕಾ’ ತಂಡದಿಂದ RRR ಚಿತ್ರ ಸಂಗೀತ ನಾಟಕಕ್ಕೆ ಅಳವಡಿಕೆ: ಅದ್ಭುತ ಪ್ರದರ್ಶನ ಕಂಡು ಬೆರಗಾದ ನಿರ್ದೇಶಕ ರಾಜಮೌಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 3:42 IST
Last Updated 23 ಮಾರ್ಚ್ 2024, 3:42 IST
<div class="paragraphs"><p>ತಕರಾಜುಕಾ ತಂಡದ ಜೊತೆ ರಾಜಮೌಳಿ</p></div>

ತಕರಾಜುಕಾ ತಂಡದ ಜೊತೆ ರಾಜಮೌಳಿ

   

SS Rajamouli X

ಬೆಂಗಳೂರು: ಎಸ್‌.ಎಸ್. ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಆರ್‌ಆರ್‌ಆರ್‌ ಅನ್ನು 110 ವರ್ಷ ಇತಿಹಾಸ ಇರುವ ಜಪಾನ್‌ನ ಮಹಿಳೆಯರದ್ದೇ ನಾಟಕ ಕಂಪನಿ ‘ತಕರಾಜುಕಾ’ (Takarazuka), ಸಂಗೀತ ನಾಟಕಕ್ಕೆ ಅಳವಡಿಸಿಕೊಂಡಿದೆ.

ADVERTISEMENT

ಇತ್ತೀಚೆಗೆ ಜಪಾನ್‌ನ ಟೊಕಿಯೋದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಕರಾಜುಕಾ ತಂಡದವರು ಆರ್‌ಆರ್‌ಆರ್‌ ಅನ್ನು ಸಂಗೀತ ನಾಟಕ ರೂಪದಲ್ಲಿ ಅದ್ಭುತವಾಗಿ ಪ್ರದರ್ಶಿಸಿದರು. ಈ ವೇಳೆ ಸಭಾಂಗಣದಲ್ಲಿ ರಾಜಮೌಳಿ ಅವರೂ ಹಾಜರಿದ್ದರು.

ರಾಜಮೌಳಿ ಅವರ ಉಪಸ್ಥಿತಿಗೆ ತಕರಾಜುಕಾ ತಂಡದವರು ಸೇರಿದಂತೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದ್ದಾರೆ.

ಈ ವಿಷಯವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ರಾಜಮೌಳಿ ಅವರು, ನಮ್ಮ ಚಿತ್ರವನ್ನು 110 ವರ್ಷ ಹಳೆಯದಾದ ಜಪಾನ್‌ನ ಮುಖ್ಯ ನಾಟಕ ಕಂಪನಿ ತಕರಾಜುಕಾ ಅವರು ಸಂಗೀತ ನಾಟಕಕ್ಕೆ ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಧನ್ಯವಾದ ಅರ್ಪಿಸಿದ್ದಾರೆ.

ತಕರಾಜುಕಾ ತಂಡದವರು ಆರ್‌ಆರ್‌ಆರ್‌ ಚಿತ್ರವನ್ನು ಸಂಗೀತ ನಾಟಕದ ಮೂಲಕ ಅದ್ಭುತವಾಗಿ ತೋರಿಸಿದರು. ನಾಟಕ ತಂಡದ ಮಹಿಳೆಯರ ಉತ್ಸಾಹ ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಜಪಾನ್‌ನಲ್ಲಿ ARIGATO GOZAIMASU (ಧನ್ಯವಾದ) ಎಂದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ರಾಮ್‌ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಮುಖ್ಯಪಾತ್ರದಲ್ಲಿದ್ದ ಆರ್‌ಆರ್‌ಆರ್‌ ಸಿನಿಮಾ 2022ರ ಮಾರ್ಚ್ 24ರಂದು ಬಿಡುಗಡೆಯಾಗಿ ಯಶಸ್ವಿಗಳಿಸಿತು. ಜಪಾನ್‌ನಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ಅಲ್ಲಿ ಸುಮಾರು ₹22 ಕೋಟಿ ಹಣ ಗಳಿಕೆ ಮಾಡಿದೆ. ಜಪಾನ್‌ನಲ್ಲಿ ಈ ಚಿತ್ರಕ್ಕೆ ಹಾಗೂ ರಾಜಮೌಳಿ, ರಾಮ್ ಚರಣ್, ಜೂನಿಯರ್ ಎನ್‌ಟಿಆರ್‌ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.