ಅಭಿಮನ್ಯು ದಾಸನಿ
ಮೈನೇ ಪ್ಯಾರ್ ಕಿಯಾ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದವರು ನಟಿ ಭಾಗ್ಯಶ್ರೀ. ಈ ಚಿತ್ರ ಈಗಲೂ ಬಾಲಿವುಡ್‌ನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಈಗ ಅವರ ಮಗ ಅಭಿಮನ್ಯು ಮನರಂಜನಾ ಕ್ಷೇತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ. ವಾಸನ್ ಬಾಲಾ ಅವರ ‘ಮರ್ದ್ ಕೊ ದರ್ದ್ ನಹೀ ಹೋತಾ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ನಟಿಸುತ್ತಿರುವವರು ರಾಧಿಕಾ ಮದನ್. ಈ ಚಿತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ.
* * *
ಅನನ್ಯಪಾಂಡೆ
ನಟ ಚುಂಕಿ ಹಾಗೂ ಭಾವನಾ ಪಾಂಡೆ ಅವರ ಮಗಳಾಗಿರುವ ಅನನ್ಯ ಪಾಂಡೆ ಸದ್ಯ ಹೆಚ್ಚು ಸುದ್ದಿಯಲ್ಲಿರುವ ಸ್ಟಾರ್ ಮಗಳು. ಅವರು ಬಾಲಿವುಡ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೇ ಹೆಚ್ಚು ವೈರಲ್ ಆಗಿತ್ತು. ಸದ್ಯದಲ್ಲೇ ಬಾಲಿವುಡ್‌ಗೆ ಅನನ್ಯ ಪಾಂಡೆ ಪ್ರವೇಶ ನಿಶ್ಚಿತವಾಗಿದ್ದು, ಕರಣ್ ಜೋಹರ್ ಅವರ ‘ಸ್ಟೂಡೆಂಟ್ ಆಫ್ ಇಯರ್–2’ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಟೈಗರ್‌ಶ್ರಾಫ್ ಹಾಗೂ ಟಾಟಾ ಸುಟಾರಿಯ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್‌ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಈ ವರ್ಷದ ಅತಿ ನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿಕೊಂಡಿದೆ.
* * *
ಸಾರಾ ಆಲಿ ಖಾನ್
ಸೈಫ್ ಆಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳು ಸಾರಾ ಆಲಿ ಖಾನ್ ಸದ್ಯದಲ್ಲೇ ‘ಕೇದರನಾಥ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಲಿದ್ದಾರೆ. ಭವಿಷ್ಯದ ನಾಯಕಿ ಎಂದು ಬಿಂಬಿತವಾಗುತ್ತಿರುವ ಈ ನಟಿಯ ಚಿತ್ರ ಬಿಡುಗಡೆಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಾಯಕನಾಗಿ ನಟಿಸುತ್ತಿದ್ದಾರೆ. ಇವರು ಈಗಲೇ ಎರಡನೇ ಚಿತ್ರಕ್ಕೂ ಸಹಿ ಮಾಡಿದ್ದು, ರೋಹಿತ್ ಶೆಟ್ಟಿಯ ‘ಸಿಂಭ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವುದು ವಿಶೇಷ.
* * *
ಕರಣ್ ಡಿಯೋಲ್
ಸನ್ನಿ ಡಿಯೋಲ್ ಅವರು 1983ರಲ್ಲಿ ‘ಬೇತಾಬ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಈಗ ಅವರ ಮಗ ಕರಣ್ ಡಿಯೋಲ್ ಅವರು ‘ಪಲ್ ಪಲ್ ದಿಲ್ ಕೆ ಪಾಸ್’ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಡುತ್ತಿದ್ದಾರೆ. ಮಗನ ಮೊದಲ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಸನ್ನಿಡಿಯೋಲ್ ‘ನಾನು ಆತನ ಜೊತೆಗೇ ಯಾವಗಲೂ ಇರುತ್ತೇನೆ., ಆದರೆ ಆತನಿಗಾಗಿ ಕೆಲಸ ಅಥವಾ ಸಿನಿಮಾ ಆಯ್ಕೆ ಮಾಡಿಕೊಡಲಾರೆ. ಆತನ ಆತ್ಮವಿಶ್ವಾಸ ಹಾಗೂ ಪ್ರತಿಭೆ ಮೂಲಕವೇ ಆತ ಎತ್ತರಕ್ಕೆ ಏರಬೇಕು’ ಎಂದು ಹೇಳಿದ್ದಾರೆ.
* * *
ವರ್ಧಮಾನ ಪುರಿ
ಮತ್ತೊಂದು ಸಿನಿಕುಟುಂಬದ ಕುಡಿ ಬಾಲಿವುಡ್‌ಗೆ ಸದ್ಯದಲ್ಲೇ ನಾಯಕನಾಗಿ ಪ್ರವೇಶಿಸಲಿದ್ದಾರೆ. ಅವರೇ ಅಮರಿಷ್‌ಪುರಿ ಅವರ ಮೊಮ್ಮಗ ವರ್ಧಮಾನ್ ಪುರಿ. ನಟನೆ ಇವರಿಗೆ ರಕ್ತಗತವಾಗಿ ಒಲಿದುಬಂದಿದೆ. ಇವರು ಜಯಂತಿಲಾಲ್ ಗಡ್ಡ ಅವರ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಈ ಚಿತ್ರದ ಕೆಲಸಗಳು ನಡೆಯುತ್ತಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.