ಬೆಂಗಳೂರು: ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್ ಹಾಗೂ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸ್ತ್ರೀ 2' ಸಿನಿಮಾ ಭಾರತದಲ್ಲಿ ಬರೋಬ್ಬರಿ ₹ 600 ಕೋಟಿ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಅಮೆಜಾನ್ ಪ್ರೈಮ್ ವಿಡಿಯೊ ಮೂಲಕ ಸಿನಿಮಾ ವೀಕ್ಷಿಸಬಹುದು. ಆದರೆ, ಇದಕ್ಕೆ ಬಾಡಿಗೆ ಪಾವತಿ ಮಾಡಬೇಕಿದೆ.
ಬೇಡಿಕೆ ಇರುವ ಚಿತ್ರಗಳನ್ನು ಅಮೆಜಾನ್ ಪ್ರೈಮ್ ರೆಂಟ್ ಕ್ಯಾಟಗರಿ ಅಡಿಯಲ್ಲಿ ಪ್ರಸಾರ ಮಾಡುತ್ತಿದೆ. ಇದನ್ನು ನೋಡಬೇಕು ಎಂದರೆ ನಿಗದಿಪಡಿಸಿದ ಹಣ ಪಾವತಿಸಬೇಕು. ಸ್ತ್ರೀ 2 ಚಿತ್ರಕ್ಕೂ ಇದೇ ತಂತ್ರವನ್ನು ರೂಪಿಸಲಾಗಿದೆ.
ಸ್ತ್ರೀ 2 ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ₹349ಕ್ಕೆ ಲಭ್ಯವಿದೆ. ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾವನ್ನು ನೋಡಬಹುದು. ಚಂದಾದಾರರು ಇದನ್ನು ಉಚಿತವಾಗಿ ವೀಕ್ಷಿಸಬೇಕು ಎಂದರೆ ಮತ್ತಷ್ಟು ದಿನ ಕಾಯಬೇಕು. ಅಲ್ಲಿಯವರೆಗೆ ಬಾಡಿಗೆ ಹಣ ಪಾವತಿಸಬೇಕು.
ಆಗಸ್ಟ್ 15ರಂದು ತೆರೆ ಕಂಡ ಸ್ತ್ರೀ–2, 2018ರಲ್ಲಿ ಬಿಡುಗಡೆಯಾದ ಸ್ತ್ರೀ ಸಿನಿಮಾದ ಸೀಕ್ವೆಲ್ ಆಗಿದೆ. ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಅಡಿ ದಿನೇಶ್ ವಿಜನ್ ಹಾಗೂ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.
ಅಕ್ಷಯ್ ಕುಮಾರ್, ವರುಣ್ ಧವನ್ ಮೊದಲಾದವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.